ಚಳ್ಳಕೆರೆ :
ಈ ದಿನ ದಿನಾಂಕ-04/04/2025 ರಂದು ಮಧ್ಯಾಹ್ನದ ನಂತರ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಜಿಲ್ಲೆ ರವರ ಕಚೇರಿಗೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮಸ್ಥರ ಸಾರ್ವಜನಿಕ ದೂರಿನ ಮೇರೆಗೆ ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರ ನಿರ್ದೇಶನದಂತೆ ಚಳ್ಳಕೆರೆ ತಾಲೂಕಿನ ಮಾನ್ಯ ತಹಶೀಲ್ದಾರರು ಮತ್ತು ತಾಲೂಕು ದಂಡಾಧಿಕಾರಿಗಳು ಆದ ರೆಹಮಾನ್ ಪಾಷಾ ಸರ್ ಹಾಗೂ ಚಳ್ಳಕೆರೆ ವಲಯದ ಅಬಕಾರಿ ಸಿಬ್ಬಂದಿಯೊಂದಿಗೆ ನಾವು ರೇಕಲಗೆರೆ ಗ್ರಾಮಕ್ಕೆ ಜಂಟಿಯಾಗಿ ಭೇಟಿ ನೀಡಿ ಅನುಮನಾಸ್ಪದವಾಗಿ ಕಂಡುಬಂದ ಸ್ಥಳಗಳ ಮೇಲೆ ಅಬಕಾರಿ ದಾಳಿ ಮಾಡಿ ದೂರಿನಲ್ಲಿ ಉಲ್ಲೇಖಿಸಿದ್ದ ಆರೋಪಿತರನ್ನು ಗ್ರಾಮಸ್ಥರ ಸಮಕ್ಷಮ ತಹಶೀಲ್ದಾರರು ಹಾಗೂ ನಾವು ವಿಚಾರಣೆ ನಡೆಸಿ ಇನ್ನು ಮುಂದೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುವುದಾಗಿ ದೂರು ಬಂದಲ್ಲಿ ನಿಮ್ಮಗಳ ವಿರುದ್ಧ ಸೆಕ್ಷನ್ 109ರಡಿಯಲ್ಲಿ ಸದ್ವರ್ತನೆಗಾಗಿ ಒಂದು ವರ್ಷದ ಅವಧಿಗಾಗಿ ಹಾಜರುಪಡಿಸುವ ಬಗ್ಗೆ ಹಾಗೂ ಘೋರ ಪ್ರಕರಣ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಲಾಯಿತು ಹಾಗೂ ಗ್ರಾಮಸ್ಥರ ಸಮಕ್ಷಮ ಗ್ರಾಮ ಸಭೆ ನಡೆಸಲಾಯಿತು.

