ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಸಾಹಿತ್ಯದ ಕಡೆ ಒಲವು ಬೆಳಸಿಕೊಂಡಾಗ ಮಾತ್ರ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಸಾಧ್ಯ: ವಿಶ್ರಾಂತ ಕುಲಪತಿ ಜೆ.ವೆಂಕಟೇಶ್ ಅಭಿಮತ 

ಚಳ್ಳಕೆರೆ: ವಿದ್ಯಾರ್ಥಿಗಳು ಕೈಯಲ್ಲಿ ಪುಸ್ತಕವನ್ನು ಹಿಡಿಯುವುದನ್ನು ಬಿಟ್ಟು ಹೆಚ್ಚಿನ ಮೊಬೈಲ್ ಬಳಕೆಯಿಂದಾಗಿ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವುದಲ್ಲದೆ ಕಣ್ಣಿನ ದೃಷ್ಟಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೆಪುರಂ ಜೆ ವೆಂಕಟೇಶ್ ಅಭಿಪ್ರಾಯ ಪಟ್ಟರು.

ನಗರದ ಹೆಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಡಾ. ಎಸ್ ಪಾರಿಜಾತ ರವರ ಸನೂತನ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಂತ ಸಾಮರ್ಥ್ಯವಿರತ್ತದೆ ಅಂತಹ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಬೆಳವಣಿಗೆ ಹೊಂದಬೇಕು ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆ ಗಮನಹರಿಸಿದಾಗ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯ ವಿದ್ಯಾರ್ಥಿಗಳು ಮೊಬೈಲ್ ಗಳಿಗೆ ಗುಲಾಮರಾಗದೆ ತಮ್ಮ ಸ್ವಂತ ಇಚ್ಛಾಶಕ್ತಿಯಿಂದ ಏನನ್ನಾದರೂ ಸಾಧಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ತಿಪ್ಪಣ್ಣ ಮರಿಕುಂಟೆ ಪುಸ್ತಕ ಓದುವವರು ಕೃತಿ ಏನನ್ನು ಹೇಳುತ್ತದೆ ಎಂಬುದನ್ನು ಅರಿಯಬೇಕು ಕೃತಿಯಲ್ಲಿ ವಿಮರ್ಶೆ ಮಾಡುವುದು ಸುಲಭದ ಕೆಲಸವಲ್ಲ ಅಂತಹ ಸಾಧನೆಯನ್ನು ಡಾ. ಪಾರಿಜಾತ ರವರು ಒಬ್ಬ ಮಹಿಳೆ ಯಾಗಿ ಸಾಧನೆ ಮಾಡಿ ತೋರಿಸಿದ್ದಾರೆ ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಸಾಹಿತ್ಯ ಪ್ರತಿಯೊಬ್ಬ ಬದುಕನ್ನು ಬಲಗೊಳಿಸುತ್ತದೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸಾಮಾಜಿಕವಾಗಿ ಕೆಟ್ಟ ಸಂದೇಶಗಳು ರವಾನೆ ಯಾಗುತ್ತಿರುವುದರಿಂದ ಜನರನ್ನು ಹಾಳು ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೃತಿಯನ್ನು ಕುರಿತು ಮಾತನಾಡಿದ ಬಂಡಾಯ ಸಾಹಿತಿ ಡಾ. ಸಿ ಶಿವಲಿಂಗಪ್ಪ ವಿದ್ಯಾರ್ಥಿಗಳು ತಮ್ಮ ಚಂಚಲ ಮನಸ್ಸಿಗೆ ಮೊದಲು ಕಡಿವಾಣ ಹಾಕಬೇಕು ಆಗ ಮಾತ್ರ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ ಇಂದಿನ ಜಗತ್ತು ಧರ್ಮಾಂಧತೆಯ ಸಂಘರ್ಷದಲ್ಲಿ ಮುಳುಗಿಹೋಗಿದೆ ಒಬ್ಬ ವಿಮರ್ಶಕನಿಗೆ ಸಾಮಾಜಿಕ ಜವಾಬ್ದಾರಿಗಳು ಇರಬೇಕು ನಿರಂತರ ಅಧ್ಯಯನ ಚಿಂತನೆ ಇದ್ದವರು ಮಾತ್ರ ಉತ್ತಮ ವಿಮರ್ಶಕರಾಗಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ ಶಿವಾನಂದಯ್ಯ ಲೇಖಕಿ ಡಾ. ಎಸ್ ಪಾರಿಜಾತ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ಕೆ ಚಿತ್ತಯ್ಯ ಡಾ. ರಾಜಣ್ಣ ಗುರು ಶಾಂತಪ್ಪ ಇಸ್ಮಾಯಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!