ಚಳ್ಳಕೆರೆ :

ಚಳ್ಳಕೆರೆ: ಆಂಧ್ರದ ಗಡಿಯನ್ನು ಹಂಚಿಕೊಂಡಿರುವ ಚಳ್ಳಕೆರೆ ಸಾರ್ವಜನಿಕ 100 ಹಾಸಿಗೆ ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗೆ ಭಾಜನವಾಗಿರುವುದು ಇಲ್ಲಿನ ವೈದ್ಯಾಧಿಕಾರಿಗಳು ಸಂತಸದ ನೆಗೆಬೀರಿದ್ದಾರೆ.

ತನ್ನದೇಯಾದ ವೈಶಿಷ್ಟಮಯ ಸೇವೆಯಿಂದ ರಾಷ್ಟ್ರ
ಮಟ್ಟದಲ್ಲಿ ಗುರುತಿಸಿಕೊಂಡ ಆಸ್ವತ್ರೆ ಇತ್ತೀಚಿಗಷ್ಟೇ
ನ್ಯಾಷನಲ್ ಕ್ವಾಲಿಟಿ ಅಶೂರೆನ್ಸ್ ಸ್ಟಾಂಡಡ್
೯(ಎನ್ಯೂಎಎಸ್) ವತಿಯಿಂದ ನಡೆಸಿದ ರಾಷ್ಟ್ರ
ಮಟ್ಟದ ಮೌಲ್ಯಾಂಕದಲ್ಲಿ ಶೇ.90.88ರಷ್ಟು
ಗಳಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ.

ಇಲ್ಲಿನ
ಡಾ.ಜೆ.ಡಿ.ವೆಂಕಟೇಶ್,
ಆಡಳಿತಾಧಿಕಾರಿ
ವೈದ್ಯರು, ಶುಶೂಷಕರು ಹಾಗೂ ಸಿಬ್ಬಂದಿ ವರ್ಗ
ತಮಗೆ ನೀಡಿದ ಕಾರ್ಯದಲ್ಲಿ ಲೋಪವೆಸಗದೆ
ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಎಲ್ಲಾ ವಿಭಾಗದಲ್ಲೂ ಆಸ್ಪತ್ರೆ ಮೇಲುಗೈ ಸಾಧಿಸಿದೆ.
ರಾಷ್ಟ್ರಮಟ್ಟದಿಂದ ಪರಿಶೀಲನೆಗೆ ಬಂದ ಅಸೆನ್ಸರ್
ಮತ್ತು ವೈದ್ಯಾಥಿಕಾರಿಗಳಾದ ಡಿ.ಎಸ್.ಚಕ್ರವರ್ತಿ,
ಡಾ.ಜಿ.ವಿಶಾಲಿನಿ ಬೇರೆ ರಾಜ್ಯಗಳಿಂದ ನಿಯುಕ್ತಿ
ಗೊಂಡು ಆಗಮಿಸಿ ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನೂ ಹಂತ, ಹಂತವಾಗಿ ಪರಿಶೀಲಿಸಿ ಸಂತಸ
ವ್ಯಕ್ತಪಡಿಸಿದ್ದರು. ನಂತರ ನಡೆದ ಮೌಲ್ಯಾಂ ಕದಲ್ಲಿ
ಆಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಪ್ರಶಂಸೆಗೆ ಪಾತ್ರ ವಾದ
ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ಷೇತ್ರದ ಶಾಸಕ,
ಸಣ್ಣಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಸೇರಿದಂತೆ ಎಲ್ಲರನ್ನೂ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ
ಡಾ.ಡಿ.ಆರ್.ಮಂಜಪ್ಪ, ಸತೀಶ್‌ಆದಿಮನಿ,
ಅಮಿತ್‌ಗುಪ್ತ,
ಪ್ರಜ್ವಲನ,
ಕೆ.
ಶಿವಕುಮಾರ್, ಆಯುಷ್ ವೆಂಕಟೇಶ್, ಪಂಕಜ,
ಕೆ.ಆರ್.ನಾಗರಾಜು, ಮ್ಯಾಟ್ರನಂಜುಳಾ, ಸ್ಟಾಪ್
ನರ್ಸ್‌ಗಳಾದ ನಿರ್ಮಲ, ನಾಗರತ್ನ, ಸಾವಿತ್ರಿ,
ಎನ್.ಎಸ್.ಪೂರ್ಣಿಮಾ, ಸರಸ್ವತಿ, ಓಂಕಾರಪ್ಪ,
ಹೊನ್ನಾವತಿ, ಉಮಾ, ಸೌಂದರ್ಯ, ಶಿವಕು
ಮಾರ್, ಮಹಂತೇಶ್, ರಾಧ ಮುಂತಾದವರು
ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!