“ಶಾರದಾಮಾತೆಯಿಂದ ಮೊದಲು ಮಂತ್ರ ದೀಕ್ಷೆ ಪಡೆದವರು ಸ್ವಾಮಿ ಯೋಗಾನಂದರು”- ಯಶೋಧಾ ಪ್ರಕಾಶ್.
ಚಳ್ಳಕೆರೆ-ಶ್ರೀಮಾತೆ ಶಾರದಾದೇವಿಯವರಿಂದ ಮೊದಲು ಮಂತ್ರ ದೀಕ್ಷೆ ಪಡೆದವರು ಸ್ವಾಮಿ ಯೋಗಾನಂದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಹೇಳಿದರು.
ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಸ್ವಾಮಿ ಯೋಗಾನಂದರ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಸ್ವಾಮಿ ಯೋಗಾನಂದರು ಇಂದ್ರೀಯ ನಿಗ್ರಹಿಗಳಾಗಿ ಜಿತೇಂದ್ರಿಯ ಎಂದು ಕರೆಸಿಕೊಡವರು.
ಶ್ರೀಮಾತೆಯವರ ಸೇವೆಯಲ್ಲಿ ಇವರ ಪಾತ್ರ ಹಿರಿದು, ಶ್ರೀರಾಮಕೃಷ್ಣರು ಸ್ವಾಮಿ ಯೋಗಾನಂದರ ಮೇಲೆ ಬೀರಿದ ಪ್ರಭಾವ ಅಗಾಧವಾದದ್ದು ಎಂದು ತಿಳಿಸಿದರು.ಈ ಸತ್ಸಂಗದ ಅಂಗವಾಗಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನೆ ಮತ್ತು ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮ.
ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಂಜುಳ, ರಶ್ಮಿ ವಸಂತ, ಶಾಂತಮ್ಮ, ವಿಜಯಲಕ್ಷ್ಮಿ, ಭ್ರಮರಂಭಾ, ಸೌಮ್ಯ ,ನಾಗರತ್ನಮ್ಮ , ಶಾರದಾಮ್ಮ,ತ್ರಿವೇಣಿ,ನಯನ, ಯತೀಶ್ ಎಂ ಸಿದ್ದಾಪುರ, ರಶ್ಮಿ ರಮೇಶ್, ಶೈಲಜ, ಕೃಷ್ಣವೇಣಿ, ವೀರಮ್ಮ, ದ್ರಾಕ್ಷಾಯಣಿ, ಮಾಣಿಕ್ಯ ಸತ್ಯನಾರಾಯಣ, ಜಯಶೀಲಮ್ಮ, ಲೀಲಾವತಿ, ಗೀತಾಲಕ್ಷೀ ಪಾಲ್ಗೊಂಡಿದ್ದರು.

