ಚಳ್ಳಕೆರೆ :

ವಿಧಾನ ಸಭೆಯ ಶಾಸಕರು, ಮತ್ತು ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಂತ್ರಿಗಳು ಸೇರಿದಂತೆ
ಸಂಬಳ , ಸಾರಿಗೆ ಭತ್ಯೆ, ಸಾರಿಗೆ, ವಿಮಾನ, ವೈದ್ಯಕೀಯ ಅನೇಕ ಸೌಲಭ್ಯಗಳನ್ನು ಡಬಲ್ ಸಂಬಳ ಈಗಿರುವ ಸಂಬಳಕ್ಕೆ ಎರಡು
ಪಟ್ಟುನ್ನು ವಿಧಾನ ಸಭೆ, ವಿಧಾನ ಪರಿಷತ್ ನಲ್ಲಿ ಕಾಯ್ದೆಯನ್ನು ಸದನದಲ್ಲಿ ಚರ್ಚಿಸದೇ ಕಾಂಗ್ರೇಸ್ , ಬಿ.ಜೆ.ಪಿ ಮತ್ತು ಜೆ.ಡಿ.ಎಸ್.
ಪಕ್ಷಗಳು ಪರ-ವಿರೋಧವಿಲ್ಲದೇ ಸಂಬಳ ಹೆಚ್ಚುವರಿಗೆ ಅನುಮೋದನೆ ನೀಡಿರುವುದನ್ನು ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾಗಿ
ಖಂಡಿಸುತ್ತಾ ರಾಜ್ಯ ಪಾಲರು ಅನುಮೋದನೆಗೆ ಹೋಗಿರುವ ಕಾಯ್ದೆಯನ್ನು ಅಂಕಿತ ಹಾಕದೇ ವಾಪಾಸ್‌ ಕಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೊಳಕಾಲ್ಮುರು ತಾಲೂಕು ಶಾಖೆ ಖಂಡಿಸುತ್ತದೆ.

ಅವರು ಮೊಳಕಾಲ್ಮೂರು ತಾಲೂಕಿನ ತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು,

ರಾಜ್ಯ
ಪಾಲರಲ್ಲಿ ಮನವಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಜನ ಸಾಮಾನ್ಯರ ಮೇಲೆ ಸ್ಟಾಂಪ್‌, ಸರ್ವವ, ಭೂದಾಖಲೆ, ರಿಜೀಸ್ಟ್ರೇಷನ್ ,
ಕಂದಾಯ, ಪಹಣಿ, ಬಸ್ಸಿನ ದರ, ವಿದ್ಯುತ್, ನೀರಿನ ದರ, ಮುಂತಾದ ವಸ್ತುಗಳ ಮೇಲೆ ನಾಲ್ಕುಪಟ್ಟು ತೆರಿಗೆ ಹಾಕಿ ಆ ಹಣದಲ್ಲಿ
ಮೋಜು ಮಾಡುತ್ತೀರಿ.

ಸದರಿ ಪ್ರಾರಂಭದಿಂದ ಮೇಲ್ಮನೆ . ಕೆಳ ಮನೆಯಲ್ಲಿ ಸಮಸ್ಯೆಗಳ ಚರ್ಚೆ ಮತ್ತು ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಕ್ಕೆ
ಚರ್ಚೆ ಮಾಡಲು ಸದನದಲ್ಲಿ 20- 30 ಜನ ಶಾಸಕರು ಇರುತ್ತಾರೆ. ಉಳಿದ ಶಾಸಕರು ಸಭೆಗೆ ಗೈರು ಹಾಜರಿಯಾಗಿ ಅವರ ಸ್ವಂತ
ಸಭೆ-ಸಮಾರಂಭಗಳಲ್ಲಿ ಭಾಗವಹಿಸಿರುತ್ತಾರ.

ವಿಧಾನ ಸಭೆ, ವಿಧಾನ ಪರಿಷತ್ ಗೆ ಶಾಸಕರು ಅವಮಾನ ಮಾಡುತ್ತಿದ್ದು, ಇವರಿಗೆ
ಸಂಬಳ , ಸಾರಿಗೆ ಹೆಚ್ಚು ಮಾಡಿಕೊಳ್ಳುವ ನೈತಿಕತೆ ಎಲ್ಲಿಂದ ಬಂತ್ತು, ಸದನದಲ್ಲಿ ಶಾಸಕರ ಹಾಜರಾತಿಗೆ ಸಭಾಧ್ಯಕ್ಷರು ವಿಶ್ರಾಂತಿ
ಕುರ್ಚಿ ಅಲ್ಲಿಗೆ ಊಟ ವ್ಯವಸ್ಥೆಗೆ ಹಣ ಖರ್ಚು ಮಾಡುತ್ತಾರೆ.

ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿದೆ. ಆದ್ದರಿಂದ ಶಾಸಕರು
ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವುದರಿಂದ ಸರ್ಕಾರವನ್ನು ವಜಾಮಾಡಬೇಕೆಂದು ಒತ್ತಾಯಿಸುತ್ತೇವೆ.

ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಒದಗಿಸಿಲ್ಲ, ನಿರ್ಗತಿಕರಿಗೆ ಕೂಡುತ್ತಿರುವ ಮಾಸಾಸನ ಕೊಟ್ಟಿಲ್ಲ, ಹೇರಿಕೆ ಮಾಡಿಲ್ಲ,
ರೈತರಿಗೆ ವಿದ್ಯುತ್ ಸರಬರಾಜಿಗೆ ಹಾಗೂ ಅಕ್ರಮ-ಸಕ್ರಮ ಗಳಂತ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಆದರೆ ಇವರ ಮೋಜು ಮಸ್ತಿ
ಜೀವನಕ್ಕೆ ಸದನದಲ್ಲಿ ಚರ್ಚೆಯಲ್ಲಿದೆ ಎಲ್ಲಾ ಪಕ್ಷಗಳು ಪಕ್ಷಭೇದ ಮರೆತು ಒಂದಾಗಿ ಸಂಬಳ ಸಾರಿಗೆ ಎರಡು ಪಟ್ಟು ಜಾಸ್ತಿ
ಮಾಡಿಕೊಂಡು ಮತದಾರರಿಗೆ ನಾಡಿನ ಜನತೆಗೆ ದ್ರೋಹ ಬಗೆಯುತ್ತಿರುವ ಸದನವನ್ನು ವಜಾಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.

ಇದೇ ಸಂಧರ್ಭದಲ್ಲಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರಾಜಣ್ಣ, ಚಂದ್ರಣ್ಣ, ದಡ್ಡಯ್ಯ, ಗೂಂಡೂರು ತಿಮ್ಮಪ್ಪ, ವಿಜಯಣ್ಣ, ರವಿಕುಮಾರ್, ಈರಣ್ಣ, ನಿಂಗಣ್ಣ, ಇತರರು ಇದ್ದರು.

About The Author

Namma Challakere Local News
error: Content is protected !!