ಚಳ್ಳಕೆರೆ : ನಗರಸಭೆಯ ಸಭಾಂಗಣದಲ್ಲಿ ನಡೆದ ತುರ್ತು ಕೌನ್ಸಿಲ್ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಅದರಂತೆ ಬೇಸಿಗೆ ಪ್ರಾರಂಭದ ದಿನಗಳಾಗಿದ್ದರಿಂದ ಚಳ್ಳಕೆರೆ ನಗರಕ್ಕೆ ಪ್ರತಿನಿತ್ಯವೂ ಸಾವಿರಾರು ಜನರು ಬಂದು ಹೋಗುತ್ತಾರೆ, ಇನ್ನೂ ಶಾಲಾ ಮಕ್ಕಳು, ಸಾರ್ವಜನಿಕರು, ಅದರಂತೆ ನಗರದಲ್ಲಿ ಇರುವಂತಹ ಸುಮಾರು 60 ಸಾವಿರ ಜನಸಂಖ್ಯೆಗೆ ಕುಡಿಯುವ ನೀರು ಎಲ್ಲಿಯೂ ಕೂಡ ಸಮಸ್ಯೆ ಆಗದಂತೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ನಗರಸಭೆಯ ಪ್ರಭಾರ ಅಧ್ಯಕ್ಷರಾದ ಸುಮಾ ಭರವಣ್ಣ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತು ಕೌನ್ಸಿಲ್ ಸಭೆಯಲ್ಲಿ ಅಧ್ಯಕ್ಷತೆ ವಹಸಿಕೊಂಡು ಮಾತನಾಡಿದರು,

ನಗರಸಭೆ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಕ್ಕೆ ಬರುವಂತಹ ವಾಹನ ಸವಾರರಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ವಾಹನ ಸವಾರರು ಪರದಾಡುತ್ತಿದ್ದಾರೆ, ಇನ್ನೂ ರಸ್ತೆ ಬದಿಯಲ್ಲಿ ನಿಲ್ಲಿಸಿ ಟ್ರಾಫಿಕ್ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದಾರೆ, ಆದ್ದರಿಂದ ಹೀಗಾಗಲೇ ಖಾಸಗಿ ಬಸ್ ನಿಲ್ದಾಣದ ಕೆಳಮಹಡಿಯಲ್ಲಿ ನಿರ್ಮಿಸಿದಂತಹ ಸ್ಥಳಕ್ಕೆ ಟೆಂಡರ್ ಕರೆದು ನಿರ್ವಹಣೆ ಮಾಡಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಆದ್ದರಿಂದ ನಗರಸಭೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ್ ಸೂಚಿಸಿದರು.

ಇನ್ನೂ ಆಂಧ್ರದ ಗಡಿಯನ್ನು ಹಂಚಿಕೊಂಡಿರುವಂತಹ ಚಳ್ಳಕೆರೆ ನಗರಕ್ಕೆ ಪ್ರತಿನಿತ್ಯ ಹೊರರಾಜ್ಯದಿಂದ ಬಂದು ಹೋಗುವಂತಹ ಪ್ರಯಾಣಿಕರು ಹೆಚ್ಚಿದ್ದಾರೆ ಅದರಂತೆ ಪ್ರಯಾಣಿಕರಿಗೂ ಹಾಗೂ ನಗರದ ರಕ್ಷಣೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಿಸಿ ಕ್ಯಾಮೆರಾ ಪಾತ್ರ ಬಹಳ ಮುಖ್ಯವಾಗಿದೆ, ಆದ್ದರಿಂದ ನಗರದಲ್ಲಿ ಸಿಸಿ ಕ್ಯಾಮರವನ್ನು ಅಗತ್ಯವಾಗಿ ಅಳವಡಿಸಬೇಕು , ಆದ್ದರಿಂದ ನಗರಸಭೆ ಅನುದಾನ ಹಾಗೂ ಶಾಸಕರ ಕ್ಷೇತ್ರ ಅಭಿವೃದ್ಧಿ ಅನುದಾನ ಸೇರಿಸಿ ಸಿಸಿ ಕ್ಯಾಮರಾ ಅಳವಡಿಸಲು ಶಾಸಕರ ಗಮನ ಸೆಳೆಯಲಾಗುತ್ತದೆ.

ನಗರದಲ್ಲಿ ನಡೆಯುವಂತಹ ವಾರದ ಸಂತೆ ದಿನ ವಹಿ ಸುಂಕ ವಸೂಲತೆಗೆ ಟೆಂಡರ್ ಕರೆಯುವ ಪ್ರಕ್ರಿಯೆಯನ್ನು ಅಧಿಕಾರಿಗಳು ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸರ್ವ ಸದಸ್ಯರು ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ನಗರಸಭೆ ಪ್ರಭಾರ ಅಧ್ಯಕ್ಷರಾದ ಸುಮ ಭರಮಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಟಿ. ಮಲ್ಲಿಕಾರ್ಜುನ, ಸದಸ್ಯರಾದ ಎಂ ಜೆ ರಾಘವೇಂದ್ರ, ಶ್ರೀನಿವಾಸ್, ಕವಿತಾ, ಸುಜಾತ, ಜೈತುಂಬಿ, ಜಯಲಕ್ಷ್ಮಿ, ಇನ್ನು ಸದಸ್ಯರು, ಸರ್ಕಾರದ ನಾಮ ನಿರ್ದೇಶನ ಸದಸ್ಯರುಗಳಾದ ಹಳೆ ನಗರದ ವೀರಭದ್ರಪ್ಪ, ನೇತಾಜಿ ಪ್ರಸನ್ನ ಕುಮಾರ್ , ಇನ್ನಿತರರು ಹಾಗೂ ನಗರಸಭೆ ಪೌರಾಯುಕ್ತ ಜಗರೆಡ್ಡಿ , ಲಿಂಗರಾಜ್, ಇಂಜಿನಿಯರ್ ವಿನಯ್ ಕುಮಾರ್ ಹಾಗೂ ಇತರ ಸಿಬ್ಬಂದಿ ವರ್ಗ ಹಾಜರಿದ್ದರು

About The Author

Namma Challakere Local News
error: Content is protected !!