ಚಳ್ಳಕೆರೆ : ಶಾಲಾ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ದಲಿತ ಎಂಬ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕರು ಹೀನಾಯವಾಗಿ ದುರ್ವತನೆ ತೋರುತ್ತಾ, ಜೀವ ಬೆದರಿಕೆ ಹಾಕಿರುವ ಆಡಿಯೋ ಒಂದು ಸೋಶಿಯಲ್‌ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಗುರುಗಳಿಗೆ ತಕ್ಕುದಾದ ಮಾತುಗಳನ್ನು ಹಾಡದೆ ಜೀವ ಬೆದರಿಕೆ ಹಾಕುವ ಈ ಆಡಿಯೋ ಪೋಷಕರಲ್ಲಿ ಆತಂಕ ಸೃಷ್ಠಿಮಾಡಿದೆ.
ಇಂತಹ ಶಿಕ್ಷಕರನ್ನು ಈ ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಎಸ್ ಡಿ ಎಂಸಿ ಅಧ್ಯಕ್ಷರು ಹಾಗೂ ಊರಿನ ಗ್ರಾಮಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ,
ಹೌದು ಚಳ್ಳಕೆರೆ ತಾಲೂಕಿನ ಕಡೆ ಹೊಡೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಸಿ ಅಧ್ಯಕ್ಷ ಎಂ.ಓಬಣ್ಣ ನವರು ಮಕ್ಕಳಿಗರ ನೀಡುವ ಮಧ್ಯಾಹ್ನದ ಬಿಸಿ ಊಟಕ್ಕೆ ವ್ಯವಸ್ಥಿತವಾಗಿ ಮಕ್ಕಳನ್ನು ಕೂರಿಸಿ ಬಿಸಿಯೂಟ ನೀಡಬೇಕು ಎಂದು ಮುಖ್ಯ ಶಿಕ್ಷಕರನ್ನು ಕೇಳಿದ್ದಾರೆ, ಆದರೆ ಇದಕ್ಕೆ ಚಕಾರ ಎತ್ತಿದ್ದ ಮುಖ್ಯ ಶಿಕ್ಷಕ ಕೆ.ಬಸವರಾಜ್, ಏನೋ ಮಾಡಿಕೊಳ್ಳತಿಯಾ ನೀನು, ನಿಮ್ಮಂತವರನ್ನು ನೋಡಿದ್ದೆನೆ, ನಿಮ್ಮಂತವರು ಮಣ್ಣಾಗಿದ್ದಾರೆ, ನಾನು ಕಳೆದ 22 ವರ್ಷಗಳಿಂದ ನಿಮ್ಮಂತವರನ್ನ ಸಾಕಷ್ಟು ಜನ ಕಂಡಿದ್ದೇನೆ ನಿನಗೆ ಶಿಕ್ಷೆ ನೀಡುತ್ತೆನೆ ಇಲ್ಲವಾದರೆ ನನ್ನ ಮೀಸೆಯನ್ನು ತೆಗೆಯುತ್ತೇನೆ ಎನ್ನುವ ಹವ್ಯಾಚ್ಚ ಶಬ್ದಗಳಿಂದ ಅಧ್ಯಕ್ಷನನ್ನು ನಿಂದಿಸಿದ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಸೋಶಿಯಲ್ ಮೀಡಿಯಾದ ಆಡಿಯೋ ಸಂಭಾಷಣೆ ಹಾಗೂ ಮುಖ್ಯ ಶಿಕ್ಷಕರ ದುರ್ವರ್ತನೆಯನ್ನು ಖಂಡಿಸಿ ಗ್ರಾಮದ ಹಲವು ಪೋಷಕರು ಬಿ ಓ ಕಚೇರಿ ಬಾಗಿಲು ತಟ್ಟಿದ್ದಾರೆ, ಗುರುವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿದ ಮುಖಂಡರು ಮಕ್ಕಳ ಪೋಷಕರು, ಎಸ್ ಡಿಎಂಸಿ ಸದಸ್ಯರು ಹಾಗೂ ಅಧ್ಯಕ್ಷರು ಮುಖ್ಯ ಶಿಕ್ಷಕರಾದ ಕೆ. ಬಸವರಾಜ ರ ಜಾತಿ ತಾರತಮ್ಯ ವಿಪರೀತವಾಗಿದೆ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದೆ ಸರ್ವಾಧಿಕಾರಿ ನಡೆಸಿಕೊಂಡು, ಎಸ್ ಡಿ ಎಂಸಿ ಅಧ್ಯಕ್ಷರು ಎನ್ನುವ ಗೌರವ ಹಾಗೂ ಮರ್ಯಾದೆ ನೀಡದೆ ಅವರನ್ನು ಬೇಕಾಬಿಟ್ಟಿ ನಡೆಸಿಕೊಂಡು ಹಾಗೂ ಮಕ್ಕಳಿಗೆ ನೀಡುವಂತಹ ಬಿಸಿಯೂಟ ಕಳಪೆ ಗುಣಮಟ್ಟದಿಂದ ಕೂಡಿದೆ, ಹಾಗೂ ವ್ಯವಸ್ಥಿತವಾಗಿ ಮಕ್ಕಳಿಗೆ ನೀಡದೆ, ದರ್ಪ ತೋರುತ್ತಿದ್ದಾರೆ, ಈ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅತೀ ಹೆಚ್ಚಿನದಾಗಿ ಪರಿಶಿಷ್ಟ ಜಾತಿಗೆ ಸೇರಿದಂತಹ ಮಕ್ಕಳು ಇಲ್ಲಿ ಬರುತ್ತಾರೆ.
ಆದ್ದರಿಂದ ಈ ಮುಖ್ಯ ಶಿಕ್ಷಕರನ್ನು ಬೇರೆಕಡೆ ವರ್ಗಾಯಿಸಿ ನಮ್ಮ ಗ್ರಾಮಕ್ಕೆ ನಮ್ಮ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್.ಸುರೇಶ್ ರವರೆಗೆ ಮನವಿ ನೀಡಿ ಒತ್ತಾಯ ಮಾಡಿದ್ದಾರೆ.
ಇದೇ ಸಂಧರ್ಭದಲ್ಲಿ ಮಕ್ಕಳ ಪೋಷಕರು ಹಾಗೂ ಗ್ರಾಮದ ಸಾರ್ವಜನಿಕರಾದ ಎಸ್ ಡಿ ಎಂಸಿ ಅಧ್ಯಕ್ಷ ಎ.ಓಬಣ್ಣ, ಮಹಾದೇವಿ, ನಾಗಮಣಿ, ಕಲಿವೀರಪ್ಪ, ಶಿವಲಿಂಗಮ್ಮ, ದಿನೇಶ್, ಪಾಂಡುರಂಗಪ್ಪ , ರಾಜಪ್ಪ, ಗುರುಲಿಂಗಪ್ಪ, ಮಾರಪ್ಪ, ಅಶೋಕ, ರಾಮಲಿಂಗಪ್ಪ, ಮಾರಕ್ಕ, ಇನ್ನು ಇತರರು ಒತ್ತಾಯ ಮಾಡಿದರು.

