“ಅಮ್ಮ ಎಂಬ ಶಬ್ದಕ್ಕೆ ಅದ್ಭುತ ಶಕ್ತಿಯಿದೆ”-ಶ್ರೀಮತಿ ಕೆ.ಎಲ್ ವಸಂತಕುಮಾರಿ ಜಯಪ್ರಕಾಶ್

ಚಳ್ಳಕೆರೆ-ಅಮ್ಮ ಎಂಬ ಶಬ್ದಕ್ಕೆ ಅದ್ಭುತ ಶಕ್ತಿಯಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಕೆ.ಎಲ್ ವಸಂತಕುಮಾರಿ ಜಯಪ್ರಕಾಶ್ ತಿಳಿಸಿದರು.

ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ವಾಲ್ಮೀಕಿ ನಗರದ ಸಹ್ಯಾದ್ರಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಶ್ರೀಮಾತೆ ಶಾರದಾದೇವಿ ಅವರ ಜೀವನ ಮತ್ತು ಸಂದೇಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಶ್ರೀಮಾತೆ ಶಾರದಾದೇವಿ ಹೇಳುವಂತೆ ಮನುಷ್ಯನಿಗೆ ಕಷ್ಟಗಳು ಅನಿವಾರ್ಯ,ಆದರೆ ನಿರಂತರ ಭಗವನ್ನಾಮ ಜಪದಿಂದ ಅವುಗಳ ತೀವ್ರತೆ ಕಡಿಮೆಯಾಗುತ್ತದೆ. ಸದಾ ಕಾರ್ಯಶೀಲನಾಗಿದ್ದರೆ ನಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರುವುದಿಲ್ಲ, ನಿತ್ಯ ಕೆಲಸದ ಜೊತೆಗೆ ಆಧ್ಯಾತ್ಮಿಕ ಸಾಧನೆಗಳ ಕಡೆಗೂ ಗಮನ ಹರಿಸಬೇಕು ಎಂದು ಹೇಳಿದರು.ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನೆ ಮತ್ತು ಶ್ರೀಶಾರದಾದೇವಿ ಜೀವನಗಂಗಾ ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು. ಈ ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ, ಟಿ.ಎಂ.ವಿಜಯಕಲಾ, ಲಕ್ಷ್ಮೀದೇವಮ್ಮ,‌ ಗೀತಾ ನಾಗರಾಜ್,ಸುಜಾತ, ಗಾಯತ್ರಿ, ತಿಪ್ಪಮ್ಮ,ಗಿರಿಜಾಮ್ಮ, ಬಿ.ಟಿ.ಗಂಗಾಂಬಿಕೆ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!