ನಾಯಕನಹಟ್ಟಿ, ಮಾರ್ಚ್ 24ರಂದು ಹಟ್ಟಿ ತಿಪ್ಪೇಶನ ಮರಿಪರಿಷೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಎಚ್. ಗಂಗಾಧರಪ್ಪ,
ನಾಯಕನಹಟ್ಟಿ:: 2025ರ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ವಾರ್ಷಿಕ ಜಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಎಚ್, ಗಂಗಾಧರಪ್ಪ ಹೇಳಿದರು.
ಗುರುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ದೇವಸ್ಥಾನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಾರ್ಚ್ 24ರಂದು ಸೋಮವಾರ ಮರುಪರಿಷೆ ಧಾರ್ಮಿಕ ಕಾರ್ಯ ಇದೆ ಆ ಕಾರ್ಯ ಮುಗದಿರಿ ಈ ವರ್ಷ ಜಾತ್ರೆ ಮತ್ತು ರಥೋತ್ಸವ ಮುಗಿದಂತೆ ಬೇಸಿಗೆ ಬಿಸಿಲು ಪ್ರತಿದಿನ ಜಾಸ್ತಿ ಆಗುವುದರಿಂದ ಮಾನ್ಯ ಮುಜರಾಯಿ ಇಲಾಖೆ ಸಚಿವರು ಆಯುಕ್ತರು ಮತ್ತು ಜಿಲ್ಲಾಡಳಿತ ಬೇಸಿಗೆ ಬಿಸಿಲು ಜಾಸ್ತಿ ಆಗುತ್ತಿರುವುದರಿಂದ ಭಕ್ತರಿಗೆ ಅನುಕೂಲವಾಗಲು ನೆರಳಿನ ವ್ಯವಸ್ಥೆ ಕಲ್ಪಿಸಿದೆ ಮತ್ತು ಸುತ್ತೋಲೆಯನ್ನು ಹೊರಡಿಸಿದೆ ಹಾಗಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಹಾಕಿಸಿದ ಪರಿಸರಸ್ನೇಹಿ ತೆಂಗಿನ ಗರಿಯ ಚಪ್ಪರ ಬೇಸಿಗೆ ಮುಗಿಯುವವರೆಗೆ ಅಂದರೆ ಮೇ ಅಂತ್ಯದವರೆಗೆ ಉಳಿಸಿಕೊಳ್ಳಲಾಗುತ್ತದೆ ಇನ್ನು ವರಮಠದಲ್ಲಿ ನೆರಳಿನ ವ್ಯವಸ್ಥೆ ಚೆನ್ನಾಗಿ ಇದೆ ಅಲ್ಲಿ ಕಬ್ಬಿಣದ ತಗಡಿನ ಶೀಟಿನ ವ್ಯವಸ್ಥೆ ಇದೆ.
ಇನ್ನೂ ಒಳಮಠದ ದೇವಸ್ಥಾನದ ಆವರಣದಲ್ಲಿ ಪರಿಸರ ಸ್ನೇಹಿ ತೆಂಗಿನಗರಿ ಚಪ್ಪರವನ್ನು ಹಾಕಲಾಗಿದೆ ಭಕ್ತರು ಸಾಧ್ಯವಾದಷ್ಟು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಇರುವುದರಿಂದ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ ಸರ್ಕಾರದ ಸುತ್ತೋಲೆ ಪ್ರಕಾರ ಬಿಸಿಲಿಗೆ ಸೂಚನೆಯನ್ನು ಅನುಸರಿಸಬೇಕು ಎಂದರು.

