ಹೋಟೆಲ್ ಗಳಿಗೆ ದಿಢೀರ್ ಭೇಟಿ ನೀಡಿ ಶುಚಿತ್ವ ಪರಿಶೀಲಿಸಿದ ನಗರಸಭೆ ಅಧ್ಯಕ್ಷೆ ಸುಮಭರಮ್ಯ..

ಚಳ್ಳಕೆರೆ: ಹೋಟೆಲ್ ಗಳಲ್ಲಿ ಸುಚಿತ್ವ ಕಾಪಾಡದಿದ್ದರೆ ಹೋಟೆಲ್ ಪರವಾನಗಿಯನ್ನು ರದ್ದು ಮಾಡಿ ಎಂದು ನಗರಸಭೆ ಪ್ರಬಾರ.ಅಧ್ಯಕ್ಷೆ ಸುಮ ಭರಮಯ್ಯ ಹೇಳಿದರು.

ನಗರದ ವಿವಿಧ ಹೋಟೆಲ್ ಹಾಗೂ ಉಪಹಾರ ಕೇಂದ್ರಗಳಿಗೆ ಇಂದು ನಗರಸಭೆ ಅರೋಗ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಹೋಟೆಲ್ ತಿಂಡಿತಯಾರು‌ ಕೋಣೆ ಪರಿಶೀಲಿಸಿ ಅಲ್ಲಿನ ಸ್ವಚ್ಛತೆ ಮರಿಚಿಕೆ ಆಗಿರುವುದನ್ನು ಗಮನಿಸಿ, ಹೋಟೆಲ್ ಮಾಲೀಕರ ಮೇಲೆ ಅಕ್ರೋಶ ವ್ಯಕ್ತಿ ಪಡಿಸಿ
ಸಾರ್ವಜನಿಕರ ಅರೋಗ್ಯ ಹಿತದೃಷ್ಟಿಯಿಂದ ಹೊಟೇಲ್ ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು ತಿಂಡಿ ಊಟ ತಯಾರು ಮಾಡುವ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಜೊತೆಗೆ ಮಾಡಿದಂತಹ ಎಲ್ಲಾ ಆಹಾರ ಪದಾರ್ಥಗಳನ್ನು ಮುಚ್ಚಬೇಕು ಉತ್ತಮವಾದ ತರಕಾರಿಗಳನ್ನು ಬಳಕೆ ಮಾಡಬೇಕು.

ಹೊಟೇಲ್, ಉಪಹಾರ ಗೃಹ,ಸಂಚಾರಿ ಕ್ಯಾಂಟೀನ್, ಇನ್ನಿತರ ಆಹಾರ ಉತ್ಪನ್ನ ಸಂಗ್ರಹ ಕೇಂದ್ರಗಳ ಶುಚಿತ್ವ,ಆಹಾರ ಪದಾರ್ಥಗಳ ಮುಚ್ಚದೆ ಇಟ್ಟಿರುವುದು,ಹೊಟೇಲ್ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳು,ಶುಚಿಯಾದ ಹಾಗೂ ಸುರಕ್ಷಿತವಾದ ಆಹಾರ ನೀಡದೆ ಇರುವುದು, ಆಹಾರ ನೋಂದಣಿ ಮತ್ತು ಪರವಾನಿಗೆ ಪಡೆಯದೆ ಹಾಗೂ ನವೀಕರಣ ಮಾಡದೆ ಇರುವುದು,ಸಾರ್ವಜನಿಕ ಅರೋಗ್ಯದ ಕಡೆ ಸೂಕ್ತ ಗಮನಹರಿಸದೆ ಅವರಣದ ಸುತ್ತ ಮುತ್ತ ತ್ಯಾಜ್ಯ ವಸ್ತುಗಳ ರಾಶಿ
ಹಾಕಿರುವುದು,ಆಹಾರ ಪದಾರ್ಥಗಳನ್ನು ಪತ್ರಿಕೆಯಲ್ಲಿ ಕಟ್ಟಿಕೊಡುವುದು,ಹಳಸಿದ ಆಹಾರ ಪದಾರ್ಥಗಳನ್ನು ಪ್ರೀಸ್ಟ್ ಗಳಲ್ಲಿ ಶೇಖರಣೆ ಮಾಡಿರುವುದು ಕಂಡು ಬಂದರೆ ಅಂತಹ ಹೋಟೆಲ್ ಗಳ ಉತ್ಪನ್ನ ತಯಾರಕರಿಗೆ ನೋಟಿಸ್ ನೀಡಿ‌ ಪರವಾಗಿಲ್ಲ ರದ್ದು ಮಾಡಲಾಗುವುದು ಎಂದು ಸೂಚನೆ ನೀಡಿದರು..

ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ್ ಮಾತನಾಡಿ, ಹಲವು ಹೋಟೆಲ್ಗಳಲ್ಲಿ ಸುಚಿತ ಕಂಡುಬಂದಿಲ್ಲ ಹಾಗೂ ಪರವಾನಗಿ ನವೀಕರಣ ಮಾಡಿಲ್ಲ ಇದರಿಂದ ನಗರಸಭೆಗೆ ನಷ್ಟವಾಗುತ್ತೆ ಜೊತೆಗೆ ಇಂತಹ ಆಹಾರವನ್ನು ನೀಡಿದರೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಮತ್ತೊಮ್ಮೆ ಹೀಗೆ ಮಾಡಿದರೆ ಮುಲಾಜು ಇಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಇಂಜಿನಿಯರ್ ನರೇಂದ್ರಬಾಬು
, ಆರೋಗ್ಯ ಅಧಿಕಾರಿ ಮಹಾಲಿಂಗಪ್ಪ, ಗೀತಾ, ನಗರಸಭೆ ಅಧಿಕಾರಿಗಳು ಇದ್ದರು.

About The Author

Namma Challakere Local News
error: Content is protected !!