ಚಳ್ಳಕೆರೆ :
ಬೆಸ್ಕಾಂ ಜಾಗೃತಿ ದಳ ಹಿರಿಯ ಅಧಿಕಾರಿಗಳನ್ನು ಸಭೆಗೆ ಕರೆದು ರೈತರೊಂದಿಗೆ ಚರ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮೊಳಕಾಲ್ಮೂರು ಎಇಇ ರಾಜುರವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಅದರಂತೆ ಮೊಳಕಾಲ್ಮೂರು ವಿದ್ಯುತ್ ಪ್ರಸರಣ ಬೆಸ್ಕಾಂ ವಿಭಾಗಕ್ಕೆ ಧಾವಿಸಿದ ರೈತ ಮುಖಂಡ ಪದಾಧಿಕಾರಿಗಳು ಎಇಇ ರಾಜು ಅವರೊಂದಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು,
ರೈತರು, ಕೂಲಿಕಾರರು ಹೊಲದಲ್ಲಿ ಗುಡಿಸಲಿನಲ್ಲಿ ಕಾಲ ಕಳೆಯುತ್ತಾರೆ. ರಾತ್ರಿ ವೇಳೆ ಒಂದು ವಿದ್ಯುತ್ ದೀಪ ಅಳವಡಿಸಿಕೊಂಡರೆ ಅದು ಅಕ್ರಮ ಸಂಪರ್ಕವೆಂದು ವಿದ್ಯುತ್ ಕಳ್ಳತನದ ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸು ಅಧಿಕಾರಿಗಳು ಹಗಲು ವೇಳೆಯಲ್ಲಿ ವಿದ್ಯುತ್ ಉರಿಯುತ್ತಿರುವುದು ಕಣ್ಣಿಗೆ ಕಾಣಿಸದಿಲ್ಲವೆ, ರಸ್ತೆ ಪಕ್ಕದಲ್ಲಿಯೇ ವಿದ್ಯುತ್ ಪೊಲ್ ಆಗುತ್ತದೆ ಇದಕ್ಕೆ ಕಡಿವಾಣ ಹಾಕಿ ವಿದ್ಯುತ್ ಉಳಿಸಿ ಕೃಷಿ ಪಂಪ್ ಸೆಟ್ ಗಳಿಗೆ ಕೊಡಬೇಕು ಆದ್ದರಿಂದ ಮಾರ್ಚ್ 22 ರಂದು ಬೆಸ್ಕಾಂ ಕಚೇರಿ ಮೊಳಕಾಲ್ಮೂರಿಗೆ ಬೆಸ್ಕಾಂ ಜಾಗೃತಿ ದಳದ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ವಿನಾಕಾರಣ ವಿದ್ಯುತ್ ಹಗಲಿನಲ್ಲಿ ಹಾಳಾಗುತ್ತಿರುವುದನ್ನು ತಪ್ಪಿಸಿ ಅವಶ್ಯಕತೆ ಇರುವವರಿಗೆ ನೀಡಿ ಕಂಪನಿಗೆ ಆಗುತ್ತಿರುವ ಕೋಟ್ಯಾಂತರ ರೂಪಾಯಿ ನಷ್ಟ ತಪ್ಪಿಸಬೇಕೆಂದು ಕಡ್ಡಾಯವಾಗಿ ಸಭೆಗೆ ಹಿರಿಯ ಅಧಿಕಾರಿಗಳನ್ನು ಕರೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ
ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹೆಸರು ಸೇನೆಯ ಜಿಟಿ ಮಂಜುನಾಥ್, ಪಿ ಎಸ್ ಶ್ರೀನಿವಾಸ ಮೂರ್ತಿ, ಹಿರೇಹಳ್ಳಿ ರವಿಕುಮಾರ್ , ದಡ್ಡಯ್ಯ, ಎಸ್.ಟಿ ಚಂದ್ರಣ್ಣ, ಗುಂಡ್ಲುರು ತಿಮ್ಮಪ್ಪ, ಎಚ್ವಿ ವೀರಣ್ಣ, ಇನ್ನು ಇತರರು ಅನೇಕ ರೈತ ಮುಖಂಡರುಗಳು ಪಾಲ್ಗೊಂಡಿದ್ದರು

