ಚಳ್ಳಕೆರೆ :
ಹೊಸದುರ್ಗ: ಬಲವಂತದ ಮತಾಂತರ ತಡೆಯಿರಿ
ಶಾಲೆಯನ್ನು ಜಾಗವನ್ನು ಆಕ್ರಮಿಸಿ ಕೊಂಡು ಕ್ರಿಶ್ಚಿಯನ್ ಚರ್ಚ್
ಮಾಡಿಕೊಂಡು, ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿ
ಮತಾಂತರ ಮಾಡುತ್ತಿದ್ದಾರೆಂದು ಹೊಸದುರ್ಗದ ಮಾಜಿ ಶಾಸಕ
ಗೂಳಿಹಟ್ಟಿ ಶೇಖರ್ ಆರೋಪಿಸಿದರು.
ಅವರಿಂದು ಹೊಸದುರ್ಗದ
ಶಿವೇನಕಟ್ಟೆ ಬಳಿಯ ಶಾಲೆಯ ಜಾಗ ಆಕ್ರಮಸಿಕೊಂಡು ಮತಾಂತರ
ಮಾಡುತ್ತಿದ್ದಾರೆಂದು ತನ್ನ ಬೆಂಬಲಿಗರೊಂದಿಗೆ ಹೋಗಿ ಮತಾಂತರ
ಮಾಡಬಾರದೆಂದು ತಾಕೀತು ಮಾಡಿದರು. ಸರ್ಕಾರ ಬಲವಂತದ
ಮತಾಂತರ ತಡೆಯುವಂತೆ ಆಗ್ರಹಿಸಿದರು.

