ಚಳ್ಳಕೆರೆ :
ಚಿತ್ರದುರ್ಗ: ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆ
ಮಾಡುತ್ತಿದೆ
ದಲಿತರ ಏಳಿಗೆಗಾಗಿ ಖರ್ಚು ಮಾಡಬೇಕಾಗಿರುವ ಎಸ್ಸಿಪಿ, ಟಿಎಸ್ಪಿ
ಹಣ ರಾಜ್ಯ ಸರ್ಕಾರ 5 ಉಚಿತ ಗ್ಯಾರಂಟಿಗಳಿಗೆ ಬಳಸಿ ದುರ್ಬಳಕೆ
ಮಾಡಿಕೊಳ್ಳುತ್ತಿದೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಎಂ. ಎಸ್.
ಜಗನ್ನಾಥ್ ಆರೋಪಿಸಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿ, ಸೆಕ್ಷನ್ 70 ಅಳವಡಿಸಿಕೊಂಡು ದಲಿತರ
ಹಣ ದೋಚುತ್ತಿದೆ. 3 ತಿಂಗಳ ಹಿಂದೆ ಸೆಕ್ಷನ್ 70 ರದ್ದುಪಡಿಸಿರುವ
ರಾಜ್ಯ ಸರ್ಕಾರ ದಲಿತರ ಹಣಕ್ಕೆ ಕೈಹಾಕಿದೆ. ದಲಿತರ
ಪರವಾಗಿದ್ದೇವೆಂದು ಹೇಳುವ, ಸಿಎಂ ಸಾಬೀತುಪಡಿಸಲಿ ಎಂದರು.

