ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕ್ಷೇತ್ರದಲ್ಲಿ ಗುಗ್ಗರಿ ಹಬ್ಬ ಆಚರಣೆ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ.
ನಾಯಕನಹಟ್ಟಿ : ಪಟ್ಟಣದಲ್ಲಿ ನೆಲೆಸಿರುವ ಮದ್ಯ ಕರ್ನಾಟಕದ ಪವಾಡ ಪುರುಷ ಮಾಡಿದಷ್ಟು ನೀಡಿಬಿಕ್ಷೆ ಎಂಬ ನುಡಿಯನ್ನು ಪ್ರಪಂಚಕ್ಕೆ ಸಾರಿದಂತಹ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಕ್ಷೇತ್ರದಲ್ಲಿ ಗುಗ್ಗರಿಹಬ್ಬ ಆಚರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಗಂಗಾಧರಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗುಗ್ಗರಿ ಹಬ್ಬ ಆಚರಿಸುವ ಮೂಲಕ 2025 ನೇ ಸಾಲಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಗ್ರಾಮದ ಹಿರಿಯರು ನಡೆಸಿಕೊಂಡು ಬಂದಂತಹ ಪದ್ಧತಿಯ ಪ್ರಕಾರ ಇಂದು ಗುಗ್ಗುರಿ ಹಬ್ಬವನ್ನು ಆಚರಿಸಲಾಗುವುದು. ಹಸುಗಳ ಭರಣಿ(ಸಗಣಿ ) ಯನ್ನು ಶೇಖರಿಸಿ ಅದರಲ್ಲಿ ಹುರುಳಿಕಾಳನ್ನು ಬೇಯಿಸಿ ಗುಗ್ಗುರಿ ಹಬ್ಬವನ್ನು ಆಚರಿಸಲಾಗುವುದು. ಒಳಮಟ್ಟದಲ್ಲಿ 3 ಕ್ವಿಂಟಲ್ ಹಾಗೂ ವರಮಠದಲ್ಲಿ 3 ಕ್ವಿಂಟಲ್ ಹುರುಳಿಕಾಳನ್ನು ಬೇಯಿಸಿ ಗ್ರಾಮದವರಿಗೆ ಹಾಗೂ ಬಂದಂತಹ ಭಕ್ತಾದಿಗಳಿಗೆ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರ್ಚಕರಾದ ಮಹಂತಣ್ಣ, ರುದ್ರಮುನಿ,ಪ್ರಜ್ವಲ್ ಸಿಬ್ಬಂದಿಗಳಾದ ಸತೀಶ್, ಗುರುಸ್ವಾಮಿ, ವಕೀಲರಾದ ನಾಗೇಂದ್ರಪ್ಪ, ಪ್ರಹ್ಲಾದ್, ಟಿ ಬಿ ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು.

