ಚಳ್ಳಕೆರೆ :

ಹಳೆ ದ್ವೇಷ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ.

ಹಿರಿಯೂರು: ಜಮೀನು ದಾರಿ ವಿಚಾರವಾಗಿ ಎರಡು ಗುಂಪಿನ ಕಡೆಯವರು
ಸಿನಿಮಾ ಸ್ಟೈಲ್ ನಲ್ಲಿ ಕಲ್ಲು ದೊಣ್ಣೆ ಹಿಡಿದು ಒಬ್ಬರಿಗೊಬ್ಬರು ಹೊಡೆದಾಡುವ ಘಟನೆ ನಡೆದಿದೆ. .
ಹಿರಿಯೂರು ತಾಲ್ಲೂಕಿನ ಭರಮಗಿರಿ ಗ್ರಾಮದಲ್ಲಿ ಘಟನೆ ನಡೆದಿದ್ದು .

ಈ ಘಟನೆಯಲ್ಲಿ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಗಿರಿ ಗ್ರಾಮದ ದೇವರಾಜ್, ಮನೋಜ್, ರಮೇಶ್, ಕರಿಯಪ್ಪಗೆ ಗಂಭೀರ ಗಾಯಗಳಾಗಿವೆ.

ತಾಲೂಕಿನ ಕುಂಟಪ್ಪನಹಟ್ಟಿ ಹಾಗೂ ತಳವಾರಹಟ್ಟಿ ಗ್ರಾಮದ 20 ಕ್ಕೂ ಹೆಚ್ಚು ಜನರಿಂದ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಭರಮಗಿರಿ ಗ್ರಾಮದ ಜಮೀನಿನ ದಾರಿ ವಿಷಯದಲ್ಲಿ ಕ್ಯಾತೆ ತೆಗೆದು ಗಲಾಟೆ ಮಾಡಿಕೊಂಡಿದ್ದು ದೊಣ್ಣೆ ಕಲ್ಲುಗಳಿಂದ ಒಡೆದಾಡಿದ್ದಾರೆ..

ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..

About The Author

Namma Challakere Local News
error: Content is protected !!