“ರಾಮಾಯಣದ ಅಧ್ಯಯನ ಬದುಕಿಗೆ ಮಾರ್ಗದರ್ಶಿ”:-ಲತಾ ಗೋವಿಂದರಾಜು.

ಚಳ್ಳಕೆರೆ:-ಮಹರ್ಷಿ ವಾಲ್ಮೀಕಿ ವಿರಚಿತ ಶ್ರೀಮದ್ ವಾಲ್ಮೀಕಿ ರಾಮಾಯಣದ ಅಧ್ಯಯನ ನಮ್ಮ ಬದುಕಿಗೆ ಸದಾ ಮಾರ್ಗದರ್ಶನ ನೀಡುತ್ತದೆ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಲತಾ ಗೋವಿಂದರಾಜು ಅಭಿಪ್ರಾಯಪಟ್ಟರು.

ನಗರದ ಶ್ರೀಶಾರದಾಶ್ರಮದ ವತಿಯಿಂದ ತಾಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ವಿಕಸನ ತರಗತಿ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ರಾಮಾಯಣದಲ್ಲಿ ಬರುವ ಪ್ರಸಂಗಗಳು ಅನೇಕ ನೀತಿ ತತ್ವಗಳನ್ನು ಪ್ರತಿಪಾದಿಸುತ್ತವೆ. ಅವುಗಳ ಅಧ್ಯಯನ ಮತ್ತು ಅನುಸಂಧಾನ ಇಂದಿನ ಅಗತ್ಯ ಎಂದು ರಾಮಾಯಣದ ವೈಶಿಷ್ಟ್ಯತೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು.ಈ ಕಾರ್ಯಕ್ರಮದ ಆರಂಭದಲ್ಲಿ ಧ್ಯಾನ ಮತ್ತು ಭಜನೆಯನ್ನು ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶ್,ಸಹ ಶಿಕ್ಷಕರಾದ ಸಿ.ಎಸ್ ಭಾರತಿ,ಶಶಿಕಲಾ, ಸುನೀತರಾಣಿ,ಅಡಿಗೆ ಸಿಬ್ಬಂದಿ ಬೋರಮ್ಮ,ಪಾಪಮ್ಮ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!