ಪ್ರತಿಯೊಬ್ಬರೂ ಚರ್ಮರೋಗಕ್ಕೆ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಿ ಡಾ. ನಾಗರಾಜ್.
ನಾಯಕನಹಟ್ಟಿ: ಚರ್ಮರೋಗವನ್ನು ಯಾರು ಸಹ ಉದಾಸೀನತೆ ಮಾಡಬಾರದು ತಕ್ಷಣ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಡಾ. ನಾಗರಾಜ್ ಹೇಳಿದರು.
ಮಂಗಳವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಚತುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಚಿತ್ರದುರ್ಗ ರಾಷ್ಟ್ರೀಯ ಕುಷ್ಟರೋಗ ನಿರ್ವಹಣಾ ಕಾರ್ಯಕ್ರಮ ಜಿಲ್ಲಾ ಕುಷ್ಟರೋಗ ನಿರ್ವಹಣಾ ಅಧಿಕಾರಿಗಳ ಕಚೇರಿ ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಚಿತ್ರದುರ್ಗ ಇವರ ಸಹಯೋಗದಲ್ಲಿ ಚರ್ಮರೋಗ ತಪಾಸಣೆ ಶಿಬಿರ ಕಾರ್ಯಕ್ರಮವನ್ನು ಸಸಿಗೆ ನೀರಾಕುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು. ಚರ್ಮರೋಗ ಒಂದು ಅಪಾಯಕಾರಿಯಾಗಿದ್ದು ಯಾರು ಕೂಡ ಮುಚ್ಚುಮರೆ ಇಲ್ಲದೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜಿನ ಡಾ. ದರ್ಶನಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ವೈದ್ಯಾಧಿಕಾರಿ ಡಾ. ಗೌರಿ, ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್,ಬಿ ಆರ್ ಸಿ ಅಧಿಕಾರಿ ಚಂದ್ರಪ್ಪ, ಫಾರ್ಮಸ ಅಧಿಕಾರಿ ಅಪ್ರೋಜ್, ನಾಯಕನಹಟ್ಟಿ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಚೈತ್ರ ,ನಮ್ಮ ಕ್ಲಿನಿಕ್ ಆರೋಗ್ಯ ನಿರೀಕ್ಷಣಾಧಿಕಾರಿ ಅಕ್ಷತಾ, ಸ್ಟಾಪ್ ನರ್ಸ್ ಶಾಂತಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಬಿ. ಮಂಜುಳಾ , ಸಿ.ಸಂಪಿಗೆ, ಆಶಾ ಕಾರ್ಯಕರ್ತೆಯರಾದ ಪಾರಿಜಾತ, ಆಶಾ, ಮಂಗಳಮ್ಮ, ಪರಂಜ್ಯೋತಿ, ರತ್ನಮ್ಮ, ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು

