ಈ ದಿನ ದಿನಾಂಕ- 25.02.2025ರಂದು ಚಳ್ಳಕೆರೆ ತಾಲೂಕಿನ ಮಲ್ಲಸಮುದ್ರ ಗ್ರಾಮದ ತುಂಬಲಿನಿಂದ ಆಂಧ್ರದ ತಾಳಿಕೆರೆಗೆ ಹೋಗುವ ರಸ್ತೆಯಲ್ಲಿ ನಿಷೇಧಿತ ಅಕ್ರಮ ಸೇಂದಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಮತ್ತು 08 ಲೀಟರ್ ನಿಷೇಧಿತ ಸೇಂದಿಯನ್ನು ಜಫ್ತು ಪಡಿಸಿಕೊಳ್ಳಲಾಯಿತು, ಜಫ್ತು ಪಡಿಸಿಕೊಂಡ ಸೇಂದಿ ಹಾಗೂ ದ್ವಿಚಕ್ರ ವಾಹನದ ಅಂದಾಜು ಮೌಲ್ಯ 61000 ರೂ ಗಳಾಗಿರುತ್ತದೆ. ದಾಳಿ ಸಂದರ್ಭದಲ್ಲಿ ಚಳ್ಳಕೆರೆ ವಲಯದ ಅಬಕಾರಿ ನಿರೀಕ್ಷಕರು ಸಿ.ನಾಗರಾಜು ಅಬಕಾರಿ ಉಪ ನಿರೀಕ್ಷಕರುಗಳಾದ ಟಿ.ರಂಗಸ್ವಾಮಿ, ಡಿ.ಟಿ ತಿಪ್ಪಯ್ಯ ಅಬಕಾರಿ ಮುಖ್ಯ ಪೇದೆ ಗಳಾದ ಮಂಜುಳ, ಸೋಮಶೇಖರ, ಅಬಕಾರಿ ಪೇದೆ ದರ್ಶನ್ ಕುಮಾರ್ ಸಿ ಹಾಗೂ ವಾಹನ ಚಾಲಕರಾದ ನವನೀತ್ ಭಾಗವಹಿಸಿದ್ದರು.

