ನಾಯಕನಹಟ್ಟಿ. ನಾಯಕನಹಟ್ಟಿ ಪಟ್ಟಣ ಹೋಬಳಿಯ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಎನ್ ವೈ ಗೋಪಾಲ್ ಕೃಷ್ಣ ಹೇಳಿದರು.

ಶನಿವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು ಮನುಮೈನಹಟ್ಟಿ. ಬೋಸೆದೇವರಹಟ್ಟಿ ಬಳಿ ದೊಡ್ಡ ಕೆರೆಗೆ ಹೋಗುವ ರಸ್ತೆ ಹದಗಟ್ಟಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಲರಾಜ್,ನೇರಲಗುಂಟೆ ಸೂರನಾಯಕ, ಬಂಡೆ ಕಪಿಲೆ ಓಬಣ್ಣ, ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ವಕೀಲರಾದ ಅಶ್ವತ್ ನಾಯಕ, ಉಮಾಪತಿ, ಬಗರ್ ಹುಕ್ಕುಂ ಕಮಿಟಿ ಸದಸ್ಯ ಪಿ.ಜಿ. ಬೋರನಾಯಕ ,ಕುದಾಪುರ ಕೆ.ಜಿ. ಪ್ರಕಾಶ್,
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಟಿ. ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವ ಮಂಗಳ ಉಮಾಪತಿ, ಸದಸ್ಯರಾದ ಜೆ. ಆರ್ ರವಿಕುಮಾರ್, ಕೆ. ಪಿ. ತಿಪ್ಪೇಸ್ವಾಮಿ, ಎಂ. ಟಿ. ಮಂಜುನಾಥ್ ಶ್ರೀಮತಿ ಸುನೀತ ಮುದಿಯಪ್ಪ, ಗುರುಶಾಂತಮ್ಮ, ಹಾಗೂ ಹೋಬಳಿಯ ವಿವಿಧ ಹಳ್ಳಿಗಳ ಮುಖಂಡರಾದ ವರವು ಕಾಟಯ್ಯ ,ಶಂಕರ್ ಮೂರ್ತಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಗುಂತಕೋಲಮ್ಮನಹಳ್ಳಿ ಕೆ.ಟಿ. ಮಲ್ಲಿಕಾರ್ಜುನ್, ರೇಖಲಗೆರೆ ಎ.ಟಿ. ಅಶೋಕ್, ಜೋಗಿಹಟ್ಟಿ ಎಚ್ ಬಿ ತಿಪ್ಪೇಸ್ವಾಮಿ, ಬ್ಯಾಂಕ್ ಓಬನಾಯಕ, ನಾಯಕನಹಟ್ಟಿ ಓಬಳೇಶ್, ಗುತ್ತಿಗೆದಾರ ಕಲೀಲಿ ಮೊಳಕಾಲ್ಮೂರು. ವಿವಿಧ ಹಳ್ಳಿಗಳ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!