“ಆತ್ಮಚಿಂತನೆಯಿಂದ ಬದುಕಿನಲ್ಲಿ ಶಾಂತಿ ಸಾಧ್ಯ”:-ಮಾತಾಜೀ ತ್ಯಾಗಮಯೀ ಅಭಿಮತ.

              ಚಳ್ಳಕೆರೆ:-ಆತ್ಮಚಿಂತನೆಯಿಂದ ನಮ್ಮ ಬದುಕಿನಲ್ಲಿ ಶಾಂತಿಯನ್ನು ಪಡೆಯಬಹುದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀಯವರು ಅಭಿಪ್ರಾಯಪಟ್ಟರು.

ಆಶ್ರಮದ ಸದ್ಭಕ್ತರಾದ ಶ್ರೀಮತಿ ಪ್ರೇಮಲೀಲಾ ರಾಮಣ್ಣ ಅವರ “ಕೌಸ್ತುಭ”ನಿವಾಸದಲ್ಲಿ ಆಧ್ಯಾತ್ಮಿಕ ಜೀವಿ ಶ್ರೀಮತಿ ಇಂದ್ರಮ್ಮನವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಈ ಸತ್ಸಂಗ ಕಾರ್ಯಕ್ರಮದ ಆರಂಭದಲ್ಲಿ ದೊಡ್ಡೇರಿಯ ಶ್ರೀದತ್ತಾವಧೂತ ಆಶ್ರಮದ ಸದ್ಭಕ್ತರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಅನರ್ಘ್ಯ,ಶ್ರೀದೇವಿ, ತನಯ,ಶ್ರೀಮತಿ ಪ್ರೇಮಲೀಲಾ,ನರಹರಿ,ವಾಣಿ, ಗೀತಾ ನಾಗರಾಜ್,ಗೀತಾ ಸುಂದರೇಶ್, ಹೂವಿನ ಲಕ್ಷ್ಮೀದೇವಮ್ಮ, ಯತೀಶ್ ಎಂ ಸಿದ್ದಾಪುರ, ಲಕ್ಷ್ಮೀದೇವಮ್ಮ, ಮಾಣಿಕ್ಯ , ನಾಗರತ್ನಮ್ಮ,ಪಂಕಜ,ಶೈಲಜ, ಕೃಷ್ಣವೇಣಿ,ಉಷಾ ಶ್ರೀನಿವಾಸ್,ಸುದೀಪ್, ಗೀತವಾಣಿ,ಕೆ.ಎಸ್ ವೀಣಾ,ರಾಧಾ,ಶಿವಮ್ಮ, ಗಂಗಾಂಬಿಕೆ,ಸುಜಾತ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!