ಆರೋಗ್ಯವೇ ಮಹಾಭಾಗ್ಯ

ಉಚಿತ ಆರೋಗ್ಯ ಶಿಬಿರದಲ್ಲಿ : ಅಧ್ಯಕ್ಷೆ ಟಿ ಮಂಜುಳ ಶ್ರೀಕಾಂತ್.

ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಉಚಿತ ಆರೋಗ್ಯ ಶಿಖರವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ರಾಷ್ಟ್ರೀಯ ಆರೋಗ್ಯ ಅಭಿಯಾನ ಚಿತ್ರದುರ್ಗ, ತಾಲ್ಲೂಕು ಆಡಳಿತ, ತಾಲ್ಲೂಕ್ ಪಂಚಾಯತ್, ತಾಲ್ಲೂಕು ಆರೋಗ್ಯಧಿಕಾರಿ ಕಚೇರಿ ಚಳ್ಳಕೆರೆ, ನಮ್ಮ ಕ್ಲಿನಿಕ್ ನಾಯಕನಹಟ್ಟಿ, ಪಟ್ಟಣ ಪಂಚಾಯಿತಿ ನಾಯಕನಹಟ್ಟಿ, ವೈದೇಹಿ ಆಸ್ಪತ್ರೆ ಬೆಂಗಳೂರು ಇವರ ಸಹಾಯದೊಂದಿಗೆ ” ಆರೋಗ್ಯ ಮೇಳ” ಕಾರ್ಯಕ್ರಮವನ್ನು ಸಸಿಗೆ ನೀರು ಆಗುವ ಮೂಲಕ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ ಮಂಜುಳ ಶ್ರೀಕಾಂತ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನಾವುಗಳು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯವೇ ಮಹಾಭಾಗ್ಯ, ಆರೋಗ್ಯ ಸರಿ ಇಲ್ಲವಾದಲ್ಲಿ ನಾವುಗಳು ದುಡಿದ ಹಣವೆಲ್ಲ ಆಸ್ಪತ್ರೆಗಳಿಗೆ ಸುರಿಯಬೇಕಾಗುತ್ತದೆ. ನಾಯಕನಹಟ್ಟಿ ಪಟ್ಟಣದಲ್ಲಿ ಈ ಒಂದು ಶಿಬಿರ ಆಯೋಜನೆ ಮಾಡಿರುವುದು ನಮ್ಮ ಭಾಗ್ಯ. ಆದ್ದರಿಂದ ಪ್ರತಿಯೊಬ್ಬರೂ ಈ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ನಂತರ ಪಟ್ಟಣ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್ ಮಾತನಾಡಿ ಉಚಿತ ಆರೋಗ್ಯ ಸಿದ್ದ ಒಂದು ಸರ್ಕಾರಿ ಕಾರ್ಯಕ್ರಮ. ಆರೋಗ್ಯ ಮೇಳದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು. ಸುಮಾರು ದಿನಗಳಿಂದ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಿದರರೂ ಸಾರ್ವಜನಿಕರು ನಿರಾಸಕ್ತಿ ತೋರುತ್ತಿದ್ದಾರೆ. ಸರ್ಕಾರ ಹಲವು ಕಾರ್ಯಕ್ರಮಗಳನ್ನು ನಮ್ಮ ಮನೆ ಬಾಗಿಲಿಗೆ ವ್ಯವಸ್ಥೆ ಮಾಡಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಜೀವನದಲ್ಲಿ ಆರೋಗ್ಯವಾಗಿದ್ದರೆ ಏನು ಬೇಕಾದರೂ ಪಡೆಯಬಹುದು. ವೈದೇಹಿ ಆಸ್ಪತ್ರೆಯ ಸುಮಾರು ವೈದ್ಯರು ಸ್ಥಳದಲ್ಲೇ ಇದ್ದಾರೆ ಅವರಲ್ಲಿ ನಮ್ಮ ಸಮಸ್ಯೆಯ ಬಗ್ಗೆ ಚರ್ಚಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ಸ್ಥಾಹಿ ಸಮಿತಿ ಅಧ್ಯಕ್ಷ ಕೆ ಪಿ ತಿಪ್ಪೇಸ್ವಾಮಿ, ಸದಸ್ಯ ಓಬಯ್ಯ ದಾಸ್, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಪೂಜಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅರ್ಜುನ್, ಆರೋಗ್ಯ ಹಿರಿಯ ನಿರೀಕ್ಷಕ ಶೇಷಾದ್ರಿ,ಪಿ ಆರ್ ಓ ವೈದೇಹಿ ಆಸ್ಪತ್ರೆ ಹರೀಶ್ ಗೌಡ, ವೈದೇಹಿ ಆಸ್ಪತ್ರೆಯ ವೈದ್ಯರಾದ ಡಾ. ಪ್ರವೀಣ್, ಡಾ. ಟೀನು, ಡಾ.ಗಿರೀಶ್, ಡಾ. ಜಯಂತ್, ಡಾ. ಪೃಥ್ವಿರಾಜ್, ಡಾ. ಮಣಿಶಂಕರ್, ವೈದ್ಯ ಸಂಕೇಶ್, ನಮ್ಮ ಕ್ಲಿನಿಕ್ ಸಿಬ್ಬಂದಿಗಳಾದ ಸೌಮ್ಯ,ವೀರೇಶ್, ಪ್ರದೀಪ್, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಾಗೂ ನಾಯಕನಹಟ್ಟಿ ಪಟ್ಟಣ, ಹೋಬಳಿಯ ಸಮಸ್ತ ಸಾರ್ವಜನಿಕರು ಹಾಜರಿದ್ದರು.

About The Author

Namma Challakere Local News
error: Content is protected !!