ಚಳ್ಳಕೆರೆ : ಪಡಿತರ ಚೀಟಿ ಮಾಲೀಕರ ತಾರತಮ್ಯ ಸರಿಪಡಿಸುವಂತೆ ಹಲವು ಬಾರಿ ಆಹಾರ ಸರಬರಾಜು ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಎನ್ನದ ಅಧಿಕಾರಿಗಳು ಮಾಲೀಕರ ಜೊತೆ ಶಾಮಿಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲ್ಲೂಕು ನಾಯಕನಹಟ್ಟಿ ಸಮೀಪಿರುವ ಓಬಯ್ಯನಹಟ್ಟಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಫಲಾನುಭವಿಗಳಿಗೆ ಮೂರು ತಿಂಗಳ ಆದರೂ ರೇಷನ್ ನೀಡದೆ ಮುಂದಿನ ತಿಂಗಳು ಕೊಡುತ್ತೇವೆ ಎಂದು ಆಹಾರ ವಿತರಿಸುವ ಮಾಲೀಕ ಹೇಳುತ್ತಿದ್ದಾರೆ,
ಇಲ್ಲಿನ ಜನರು ಕೂಲಿ ಕೆಲಸ ಹೋಗದೆ ಕಾಯುವ ಸ್ಥಿತಿ ಆಗಿದೆ, ಹಿಂದಿನ ತಿಂಗಳು ಪಡಿತರ ನೀಡದೇ ಇರುವವರಿಗೆ ಮೊದಲು ನೀಡಿ ನಂತರ ಈ ತಿಂಗಳ ಪಡಿತರ ನೀಡಬೇಕು ಎಂದು ಪಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರಿಗೆ ಪಡಿತರ ವಿತರಣೆ ಮಾಡಲು ಕಲ್ಪಿಸಬೇಕು ಇವರು ಸ್ಪಂದಿಸಲ್ಲ ಎಂದು ಹಲವು ಬಾರಿ ಆಹಾರ ಸರಬರಾಜು ಅಧಿಕಾರಿಗಳ ಗಮನಕ್ಕೆ ತಂದರು ಮೌನವಾಗಿದ್ದಾರೆ

