ಚಳ್ಳಕೆರೆ :
ಮೊಳಕಾಲ್ಕೂರು: ಎಟಿಎಂ ಕಾರ್ಡ್ ವಂಚಿಸಿ ಹಣ
ಎಗರಿದ್ದ ಆರೋಪಿ ಬಂಧನ
ವ್ಯಕ್ತಿಯೊಬ್ಬರ ಕಾರ್ಡ್ ಬಳಸಿ ಎಟಿಎಂನಿಂದ ಹಣ
ತೆಗೆದುಕೊಂಡಿದ್ದ ಆರೋಪಿಯನ್ನು, ಮೊಳಕಾಲ್ಲೂರಿನ
ಪೊಲೀಸರು ಇಂದು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು
ತಾಲೂಕಿನ ಹಿರೇಮರಬ ಗ್ರಾಮದ ಗಿರೀಶ್ ಬಂಧಿತನಾಗಿದ್ದಾನೆ.
ಮೊಳಕಾಲ್ಕೂರಿನ ಎಸ್‌ಬಿಎಂ ಬಳಿ ಇರುವ ಎಟಿಎಂ ನಲ್ಲಿ ಕೆ
ದಾದಾಪೀರ್ ಮಿನಿ ಸ್ಟೇಟೆಂಟ್ ತೆಗೆದುಕೊಳ್ಳಲು ಹೋಗಿದ್ದಾಗ
ಮಿಷಿನ್ ನಲ್ಲಿರಿಸಿದ್ದ ಎಟಿಎಂ ಕಾರ್ಡ್ ನ್ನು ಬದಲಿಸಿ ಆರೋಪಿಯು,
ದಾದಾಪೀರ್ ರ ಎಟಿಎಂ ಬಳಸಿ 30ಸಾವಿರ ಡ್ರಾ ಮಾಡಿಕೊಂಡಿದ್ದ
ಎಂದು ದೂರಿನಲ್ಲಿದೆ.

