ಚಳ್ಳಕೆರೆ :
ಚಿತ್ರದುರ್ಗ: ಚಾಕೋಲೆಟ್ ಫ್ಯಾಕ್ಟರಿಗೆ ದಾಳಿ ಕಳಪೆ
ಚಾಕೋಲೆಟ್ ಪತ್ತೆ
ಚಿತ್ರದುರ್ಗದ ಹಳೇ NH4 ರ ಬಳಿ ಮುರುಘ ರಾಜೇಂದ್ರ ಆಯಿಲ್
ಫ್ಯಾಕ್ಟರಿ ಯಲ್ಲಿ ಕಳಪೆ ಚಾಕಲೇಟ್ ಕಂಡು ಬಂದಿದೆ.
ಪ್ರಜಾ ಕಲ್ಯಾಣ ಸಮಿತಿ ಹಾಗು ಡಿ ಹೆಚ್ ಓ ಕಚೇರಿ ಆಹಾರ ಮತ್ತು
ಸುರಕ್ಷತಾ ಇಲಾಖೆ ಅಧಿಕಾರಿಗಳು ಗೋದಾಮಿಗೆ ದಾಳಿ ನಡೆಸಿದ್ದಾರೆ.
ಕಾರ್ಮಿಕರು ಅಗರಬತ್ತಿ ಸೊಳ್ಳೆ ಬತ್ತಿ ತಯಾರು ಮಾಡುವುದಾಗಿ
ತಿಳಿಸಿದ್ದು, ಪರಿಶೀಲಿಸಿದಾಗ ಚಾಕಲೇಟ್ ನ ಕಚ್ಚಾ ಪದಾರ್ಥ ಹಾಗು
ಚಾಕಲೇಟ್ ಪತ್ತೆಯಾಗಿವೆ. ಆರೋಗ್ಯ ಇಲಾಖೆ ಅಧಿಕಾರಿಗಳು
ಪರಿಶೀಲಿಸಿ, ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

