ಚಳ್ಳಕೆರೆ :
ಚಿತ್ರದುರ್ಗ: ಮಾದಾರ ಶ್ರೀಗಳು ಸಮುದಾಯದ ಪರ
ಕೆಲಸ ಮಾಡುತ್ತಿಲ್ಲ
ಮಾದಿಗ ಸಮುದಾಯದ ಬಗ್ಗೆ ಕಾಳಜಿ ಇಲ್ಲದ ಮಠದ
ಶ್ರೀಗಳ ಜೊತೆ ಮಾತಾಡುವ ಪ್ರಮೇಯವಿಲ್ಲ ಎಂದು ಮಾದಿಗ
ಸಮಾಜದ ಮುಖಂಡ ಸಿಕೆ ಮಹೇಶ್ವರಪ್ಪ ಮಾದಾರ ಚನ್ನಯ್ಯ
ಶ್ರೀಗಳ ವಿರುದ್ಧ ಕಿಡಿ ಕಾರಿದರು.
ಚಿತ್ರದುರ್ಗದಲ್ಲಿಂದು ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿ, ಅವರು ಸಮುದಾಯದ ಪರ ಕೆಲಸ
ಮಾಡುತ್ತಿಲ್ಲ. ಇದನ್ನು ಶ್ರೀಗಳು ತಿದ್ದಿಕೊಳ್ಳಬೇಕು. ಸಮಾಜದ ಬಗ್ಗೆ
ಯೋಚಿಸಬೇಕು. ಮಾದಿಗ ಸಮುದಾಯದ ಮೇಲಾಗುತ್ತಿರುವ
ಗಲಾಟೆಗಳ ಬಗ್ಗೆ ಪರಿಜ್ಞಾನವಿದ್ದಿದ್ದರೆ, ಅವರು ಸಂಘ ಪರಿವಾರದ
ಜೊತೆ ಗುರುತಿಸಿಕೊಳ್ಳಿರಲಿಲ್ಲ.

