ಚಳ್ಳಕೆರೆ :
ಚಿತ್ರದುರ್ಗ: ಕಸದ ರಾಶಿಯಲ್ಲಿ ಯುವಕನ ಶವ ಪತ್ತೆ
ಚಿತ್ರದುರ್ಗದ ಹಳೇ ಬಸ್ ಡಿಪೋ ಬಳಿ ಕಸದ ರಾಶಿಯಲ್ಲಿ
ಅನಾಮಧೇಯ ವ್ಯಕ್ತಿಯೊಬ್ಬನ ಶವ ಇಂದು ಪತ್ತೆಯಾಗಿದ್ದು,
ಕುಡಿದ ಮತ್ತಿನಲ್ಲಿ ಬಂದು ಬಿದ್ದು ಮೃತಪಟ್ಟಿರಬಹುದೆಂದು
ಶಂಕಿಸಲಾಗಿದೆ.
ಬಡಾವಣೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ
ಪರಿಶೀಲನೆ ನಡೆಸಿದ್ದು, ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ
ರವಾನೆ ಮಾಡಿದ್ದಾರೆ. ಬಡಾವಣೆ ಠಾಣಾ ಪೊಲೀಸರು ಈ ಸಂಬಂದ
ಪ್ರಕರಣ ದಾಖಲಿಸಿಕೊಂಡಿದ್ದಾರೆ.

