” ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ”

ಚಳ್ಳಕೆರೆ
ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣದ ಮೌಲ್ಯವನ್ನು ಅರಿತು ಶಿಕ್ಷಣದ ಸವಿಯನ್ನು ಸವಿದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಹಿರಿಯ JMFC ಸಿವಿಲ್ ನ್ಯಾಯಾಧೀಶರಾದ ಶ್ರೀಯುತ ಶಮೀರ್ ಪಿ ನಂದ್ಯಾಳ್ ಮಕ್ಕಳಿಗೆ ಕಿವಿ ಮಾತು ಹೇಳಿದರು

ಇವರು ನಗರದ ಹೆಗ್ಗೇರಿ ತಾಯಮ್ಮ ಪ್ರೌಢಶಾಲಾ ಆವರಣದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ “ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ” ಸಮಾರಂಭದಲ್ಲಿ ಗಿಡಕ್ಕೆ ನೀರು ಇರುವ ಮೂಲಕ ಮಾತನಾಡಿದ ಇವರು

ಇತ್ತೀಚಿನ ದಿನಮಾನಗಳಲ್ಲಿ ಇಂದಿನ ಯುವ ಪೀಳಿಗೆ ಶಿಕ್ಷಣದ ಮೌಲ್ಯ ಮರೆತು ಮೊಬೈಲ್‌ ಬಳಕೆಯನ್ನು ಹೆಚ್ಚಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಇಂದಿನ ಮಕ್ಕಳು ಅತಿ ಹೆಚ್ಚು ಶಿಕ್ಷಣದ ಕಡೆ ಒತ್ತುಕೊಟ್ಟು ನಿಮ್ಮ ನಿಜ ಜೀವನದ ಗುರಿಯನ್ನು ಸಾಧಿಸಲು ಸಾಧ್ಯ ಎಂದು ಮಕ್ಕಳಿಗೆ ತಿಳಿ ಹೇಳಿದರು

ಇನ್ನು ಈ ವೇಳೆ JMFC ಹಿರಿಯ ನ್ಯಾಯಾಧೀಶರಾದ ಶ್ರೀಮತಿ ಎಚ್ ಹೇಮಾ ಹಾಗೂ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿದರು,

ಇನ್ನು ಈ ಸಂದರ್ಭದಲ್ಲಿ BO ಸುರೇಶ್, ವಕೀಲರಾದ, ಬಿ ಪಾಲಯ್ಯ, ಟೀ ರುದ್ರಯ್ಯ, M ಸಿದ್ದರಾಜು ,ನೇತ್ರಾವತಿ, ಸೇರಿದಂತೆ ಅನೇಕ ಶಿಕ್ಷಕರು ವಿದ್ಯಾರ್ಥಿಗಳು ಭಾಗಿಯಾಗಿದ್ದರು

About The Author

Namma Challakere Local News
error: Content is protected !!