ಚಳ್ಳಕೆರೆ :

ಕೈಮಗ್ಗ ನೇಕಾರರಿಗೆ ಮತ್ತು ಕೈಮಗ್ಗ ಸಂಘಗಳಿಗೆ ಅನುದಾನ ನೀಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳಿ ಚಳ್ಳಕೆರೆ ಶಾಖೆ ವತಿಯಿಂದ ಕಂದಿಕೆರೆ ಸುರೇಶ್ ಬಾಬು ರವರು ಮನವಿ ಪತ್ರ ಸಲ್ಲಿಸಿದ್ದಾರೆ.

ಇನ್ನೂ ಮನವಿ ಪತ್ರ ಸಲ್ಲಿಸಿ ಮುಖ್ಯಮಂತ್ರಿಗಳ ಗಮನ ಸೆಳೆದ ಕಂದಿಕೆರೆ ಸುರೇಶ್ ಬಾಬು, ಚಿತ್ರದುರ್ಗ ಜಿಲ್ಲೆಯು ಸೇರಿದಂತೆ ರಾಜ್ಯದಲ್ಲಿ ಸುಮಾರು 50000ಕ್ಕೂ
ಹೆಚ್ಚು ಕೈಮಗ್ಗ ನೇಕಾರರ ಹಾಗೂ ಹಲವಾರು ಕೈಮಗ್ಗ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಕೈಮಗ್ಗ ನೇಕಾರರು
ಬಡ ಹಾಗೂ ಹಿಂದುಳಿದ ವರ್ಗದವರಾಗಿದ್ದು ಈಗಲೂ ಸಹ ಕೈಮಗ್ಗ ವೃತ್ತಿಯನ್ನು ನಂಬಿಕೊಂಡು ಜೀವನ
ನಡೆಸುತ್ತಿದ್ದಾರೆ. ಸದರಿ ನೇಕಾರರ ಅನುಕೂಲಕ್ಕಾಗಿ ಈ ಕೆಳಕಂಡ ಯೋಜನೆಗಳನ್ನು 2025-26ನೇ ಸಾಲಿನ ಬಜೆಟ್‌ನಲ್ಲಿ
ಸೇರ್ಪಡೆ ಮಾಡಿ ನೇಕಾರರ ಅಭಿವೃದ್ಧಿಗೆ ಕಾರಣಿಭೂತರಾಗುವಂತೆ ವಿನಂತಿಸಲಾಗಿದೆ.

  1. ವಸತಿ ಯೋಜನೆ: ರಾಜ್ಯದಲ್ಲಿ ಕಂಬಳಿ ನೇಕಾರರು ಸೇರಿದಂತೆ ಹಲವಾರು ನೇಕಾರರು ಇದ್ದು ಬಹಳ ನೇಕಾರರು
    ವಸತಿ ರಹಿತ ನೇಕಾರರಿರುತ್ತಾರೆ. ಈ ಮೊದಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಮತ್ತು ರಾಜೀವ್‌ಗಾಂಧಿ
    ವಸತಿ ನಿಗಮದ ಮೂಲಕ ದೇವರಾಜ ಅರಸು ಯೋಜನೆಯಡಿ ಮನೆಗಳನ್ನು ನೀಡಲಾಗುತ್ತಿತ್ತು.
    ವರ್ಷಗಳಿಂದ ಮನೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಯೋಜನೆಯನ್ನು ಮುಂದುವರಿಸಿ 2025-26ನೇ ಸಾಲಿಗೆ
    1000 ಮನೆಗಳನ್ನು ಗುರಿ ನೀಡಿ ಪ್ರತಿ ಮನೆಗೆ ರೂ.5.00 ಲಕ್ಷಗಳ ಅನುದಾನ ಒದಗಿಸುವುದು.
    ಶೇಕಡ
  2. ಮಾರುಕಟ್ಟೆ ಸಂಕೀರ್ಣ: 2013-14ನೇ ಸಾಲಿನಲ್ಲಿ ತಮ್ಮ ಹಳೆ ಅವಧಿಯಲ್ಲಿ ಉಣ್ಣೆ ವಲಯ ಅಭಿವೃದ್ಧಿ
    ಯೋಜನೆಯಡಿ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ರೂ.200.00 ಲಕ್ಷಗಳ ಅನುದಾನ ಮಂಜೂರಾಗಿದ್ದು
    ಅದರಂತೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕಾಮಗಾರಿಯು
    75 ರಷ್ಟು ಮುಗಿದ್ದಿದ್ದು
    ಕಾಮಗಾರಿಯನ್ನು ಮುಕ್ತಾಯಗೊಳಿಸಲು ಹೆಚ್ಚುವರಿ ಅನುದಾನ ರೂ.99.50 ಲಕ್ಷಗಳ ಅನುದಾನ ಒದಗಿಸುವುದು,
  3. ನೇಯ್ಕೆ ಕಾರ್ಯಾಗಾರ: ಕಂಬಳಿ ವೃತ್ತಿಯನ್ನು ಬಿಸಿಲಿನಲ್ಲಿ ಮತ್ತು ಚಪ್ಪರದ ಅಡಿಯಲ್ಲಿ ಮಾಡಲಾಗುತ್ತಿದ್ದು ಅಂತಹ
    ನೇಕಾರರ ಅನುಕೂಲಕ್ಕಾಗಿ ಕಾರ್ಯಾಗಾರ ನಿರ್ಮಿಸುವುದು ಅವಶ್ಯಕತೆ ಇರುತ್ತದೆ. ಹಾಗಾಗಿ ಈ ಯೋಜನೆಯನ್ನು
    ರೂಪಿಸಿ 2025-26ನೇ ಸಾಲಿಗೆ 1000 ಕಾರ್ಯಾಗಾರಗಳನ್ನು ನೀಡಿ ಪ್ರತಿ ಕಾರ್ಯಾಗಾರಕ್ಕೆ ರೂ.2.00
    ಲಕ್ಷಗಳಂತೆ ಅನುದಾನ ಒದಗಿಸುವುದು.
  4. ತರಬೇತಿ ಕಾರ್ಯಕ್ರಮ: ಮಹಾಮಂಡಳ ಮತ್ತು ಸಂಘಗಳಿಂದ ಕೈಮಗ್ಗ ತರಬೇತಿ ಹಮ್ಮಿಕೊಳ್ಳಲು 2025-26ನೇ
    ಸಾಲಿನಲ್ಲಿ ಕೈಮಗ್ಗ ನೇಕಾರಿಕೆ ತರಬೇತಿಗಾಗಿ 500 ಗುರಿಯನ್ನು ನೀಡಿ ಪ್ರತಿ ಫಲಾನುಭವಿಗೆ ರೂ.11000/- ಗಳಂತೆ
    ಅನುದಾನವನ್ನು ಒದಗಿಸುವುದು.
  5. ದುಡಿಮೆ ಬಂಡವಾಳ
    CER
    ಮಹಾಮಂಡಳ ಮತ್ತು ಕೈಮಗ್ಗ ಸಂಘಗಳ ವ್ಯವಹಾರವನ್ನು ಮತ್ತು
    ಕಾರ್ಯಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಲು ಗ್ರಾಮೀಣಾ ಬ್ಯಾಂಕ್‌ಗಳ ಮತ್ತು ಡಿ.ಸಿ.ಸಿ. ಬ್ಯಾಂಕ್‌ಗಳ ಮೂಲಕ
    ಪ್ರಾಥಮಿಕ ಕೈಮಗ್ಗ ಸಂಘಗಳಿಗೆ ರೂ.5.00 ಲಕ್ಷಗಳವರೆಗೆ ಮತ್ತು ಮಹಾಮಂಡಳದವರಿಗೆ ರೂ.25.00
    ಲಕ್ಷಗಳವರೆಗೆ ಬಡ್ಡಿ ರಹಿತ ಸಾಲವನ್ನು ಒದಗಿಸುವುದು.

ಎಂಬೆಲ್ಲ‌ ಬೇಡಿಕೆಗಳನ್ನು ಪೂರೈಸಲು ಮುಖ್ಯ ಮಂತ್ರಿ ಗಮನ ಸೆಳೆದಿದ್ದಾರೆ.

About The Author

Namma Challakere Local News
error: Content is protected !!