ಚಳ್ಳಕೆರೆ :
ಚಿತ್ರದುರ್ಗ: ಖತರ್ನಾಕ್ ಕಳ್ಳ ಹನುಮಂತನ ಬಂಧಿಸಿದ
ಪೊಲೀಸರು
ಚಿತ್ರದುರ್ಗದ ಮೂರು ಪ್ರಕರಣಗಳು ಹಾಗೂ ಬಳ್ಳಾರಿ ಕೂಡ್ಲಿಗಿ
ಮತ್ತು ಆಂಧ್ರದ ಒಂದೊಂದು ಕೇಸಿಗೆ ಸಂಬಂಧಿಸಿದಂತೆ ಖತರ್ನಾಕ್
ಅಂತರಾಜ್ಯ ಕಳ್ಳನನ್ನು ಹಿರಿಯೂರಿನ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಳ್ಳ ಬಳ್ಳಾರಿ ಹನುಮಂತ ಮೋಜು ಮಸ್ತಿಗಾಗಿ ಕಳವು
ಮಾಡುತ್ತಿದ್ದು, ಈತನಿಂದ 350 ಗ್ರಾಂ ಒಡವೆಗಳನ್ನು ವಶಕ್ಕೆ
ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು
ಹೇಳಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಒಟ್ಟಾರೆ 27 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಎಂದರು.

