ನಿವೃತ್ತ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಟಿ ಎಂ ಕುಮಾರ್, ಶಾಲಾ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಕೆ ವಿ ವೆಂಕಟಾಚಲಪತಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಶೀರ್ವಾದ ಪಡೆದರು.

ನಾಯಕನಹಟ್ಟಿ : ಮಾಡಿದಷ್ಟು ನೀಡು ಭಿಕ್ಷೆ ಎಂಬ ಕಾಯಕ ತತ್ವವನ್ನು ಸಾರಿದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕ್ಷೇತ್ರಕ್ಕೆ ನಿವೃತ್ತ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಟಿ ಎಂ ಕುಮಾರ್, ನಿವೃತ್ತ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕೆ ವಿ ವೆಂಕಟಾಚಲಪತಿ ಶ್ರೀ ಗುರುತಿಪುರದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿ ಆಶೀರ್ವಾದ ಪಡೆದರು.

ನಂತರ ನಿವೃತ್ತ ಪ್ರಾಥಮಿಕ ಶಿಕ್ಷಣ ನಿರ್ದೇಶಕ ಎಂ ಕುಮಾರ್ ಮಾತನಾಡಿ ಶ್ರೀ ಗುರುತಿಪುರದ್ರ ಸ್ವಾಮಿಯ ಪುಣ್ಯಕ್ಷೇತ್ರ ಎನ್ನುವ ಭಾವನೆ ಯಾವತ್ತು ಮನಸಿನಲ್ಲಿ ಇದೆ. ನಾನು ಈ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ತ ನಿರ್ವಹಿಸುವ ಸಂದರ್ಭದಲ್ಲಿ ಹಾಗೂ ನನ್ನ ವೈಯಕ್ತಿಕ ಜೀವನದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಎಲ್ಲವನ್ನು ನಡೆಸಿಕೊಟ್ಟಿದ್ದಾರೆ. ಚಳ್ಳಕೆರೆಯಲ್ಲಿ ಮುಖ್ಯೋಪಾಧ್ಯಾಯರ ಸಭೆ ನಿಮಿತ್ತ ಆಗಮಿಸಿ ಸ್ವಾಮಿಯ ದರ್ಶನ ಪಡೆದವು. ಪ್ರಚಲಿತ ಶಿಕ್ಷಣದ ಪರಿಸ್ಥಿತಿ , ಅದಕ್ಕೆ ಕಂಡುಕೊಳ್ಳಲು ಹೋದಾಗ ಸಮಾಧಾನ ಮುಂದಿನ ಶಿಕ್ಷಣದ ಭವಿಷ್ಯದ ಬಗ್ಗೆ ವಿಚಾರ ಮಂಥನ ಮಾಡುವಂತ ಉದ್ದೇಶದಿಂದ ಬಂದಿರುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ನಂತರ ನಿವೃತ್ತ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕೆ ವಿ ವೆಂಕಟಾಚಲಪತಿ ಮಾತನಾಡಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಸೇವೆ ಆರಂಭಿಸಿದೆ. ಆ ಸಮಯದಲ್ಲಿಯೇ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಪ್ರಚಲಿತವಾಗಿತ್ತು. ಈ ದೇವಸ್ಥಾನದ ಪ್ರಾಮುಖ್ಯತೆ ಏನೆಂದರೆ ತಿಪ್ಪೇರುದ್ರ ಸ್ವಾಮಿಯಾಗಿದ್ದರೂ ಈ ಭಾಗದ ಜನರ ದೃಷ್ಟಿಯಲ್ಲಿ ಆರಾಧ್ಯ ದೇವರು. ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ದೈವಂ ಮಾನಸ ರೂಪೇನ ಎನ್ನುವ ಹಾಗೆ ನಮ್ಮ ಹಿಂದೂ ಸಂಸ್ಕೃತಿ ಪ್ರಕಾರ ನಡೆದುಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ವಿಷಯ ಪರೀಕ್ಷಕರು ಉಪ ನಿರ್ದೇಶಕರ ಕಚೇರಿ ಚಿತ್ರದುರ್ಗ ಜಿಲ್ಲೆ ಎಚ್ಎಮ್ ಬಸವರಾಜ್, ನಿವೃತ್ತಕ್ಷೇತ್ರ ಶಿಕ್ಷಣಾಧಿಕಾರಿಗಳು ಚಳ್ಳಕೆರೆ ಪಿ ರಾಮಯ್ಯ, ಟಿ ತಿಪ್ಪೇಸ್ವಾಮಿ ರೆಡ್ಡಿ ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆ ನೇರಲಗುಂಟೆ,ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಹಾಗೂ ಚಳ್ಳಕೆರೆಯ ಗುರುಭವನದ ಅಧ್ಯಕ್ಷ ಇವರಿಗೆ ಶಾಲಾ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದಿಸಿ ಶುಭ ಕೋರಲಾಯಿತು. ಇನ್ನೂ ಅಬ್ಬೇನಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಕೊರಡಿಹಳ್ಳಿ ಹೊಸೂರು ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎನ್ ಮಹಾಂತೇಶ್ ಇದ್ದರು.

About The Author

Namma Challakere Local News
error: Content is protected !!