ಪ್ರತಿಯೊಬ್ಬರೂ ಕಾನೂನಿನ ಅರಿವು ಪಡೆದುಕೊಳ್ಳಿ. ಸಮಾಜ ಪರಿವರ್ತನಾ ಸೇವಾ ಸಂಸ್ಥೆ ಗೌರವಾಧ್ಯಕ್ಷ ರುದ್ರಸ್ವಾಮಿ.

ನಾಯಕನಹಟ್ಟಿ:ಪ್ರತಿಯೊಬ್ಬರೂ ಸಂವಿಧಾನದ ಅಡಿಯಲ್ಲಿ ಜೀವನವನ್ನು ನಡೆಸುತ್ತಿದ್ದು ಪ್ರತಿಯೊಬ್ಬರಿಗೂ ಕಾನೂನ ಅರಿವು ಬಹಳ ಮುಖ್ಯ ಎಂದು ಸಾಮಾಜಿಕ ಪರಿವರ್ತನಾ ಸೇವಾ ಸಂಸ್ಥೆ ಗೌರವಾಧ್ಯಕ್ಷ ರುದ್ರಸ್ವಾಮಿ ಹೇಳಿದರು.

ಹೋಬಳಿಯ ಎನ್ ದೇವರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಜಿಲ್ಲಾ ಪಂಚಾಯತ್ ಚಿತ್ರದುರ್ಗ, ತಾಲೂಕು ಪಂಚಾಯತಿ ಚಳ್ಳಕೆರೆ, ಸಮಾಜ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ ಚಳ್ಳಕೆರೆ, ಸಮಾಜ ಪರಿವರ್ತನಾ ಸೇವಾ ಸಂಸ್ಥೆ (ರಿ) ಮೊಳಕಾಲ್ಮೂರು ಮತ್ತು ಎನ್ ದೇವರಹಳ್ಳಿ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಾನೂನು ಜಾಗೃತಿ ಶಿಬಿರ ಕಾರ್ಯಕ್ರಮವನ್ನು ಸಸಿಗೆ ನೀರಾಕಿ ಉದ್ಘಾಟಿಸಿ
ನಂತರ ಮಾತನಾಡಿದ ಅವರು ಸ್ವತಂತ್ರವಾಗಿ ಜೀವಿಸುವಂತಹ ಹಕ್ಕು, ಮಾತನಾಡುವಂತಹ ಹಕ್ಕು, ನಡೆದಾಡುವಂತಹ ಹಕ್ಕು, ಆಸ್ತಿ ಹಕ್ಕು ಈ ಎಲ್ಲಾ ಹಕ್ಕುಗಳನ್ನು ನಮ್ಮ ಸಂವಿಧಾನ ನಮಗೆ ನೀಡಿದೆ ಎಂದು ಹೇಳಬಹುದು. ಏಕೆಂದರೆ ಪ್ರತಿಯೊಬ್ಬರನ್ನು ನಮ್ಮ ಸಂವಿಧಾನ ರಕ್ಷಣೆ ಮಾಡುತ್ತಿದೆ. ಆ ಸಂವಿಧಾನವಿಲ್ಲವೆಂದರೆ ಬಹುತೇಕ ನಾವೆಲ್ಲರೂ ಸುಲಭವಾಗಿ ಮಾತನಾಡಲು ಸಾಧ್ಯವಿರಲಿಲ್ಲ. ಹಿಂದೆ ಗುರುಕುಲ ಪದ್ಧತಿಯಲ್ಲಿ ಕೆಲವೇ ಕೆಲವು ಮಂದಿಗಳು ಕೂತು ಚರ್ಚೆ ಮಾಡುವ ಅವಕಾಶಗಳು ಇದ್ದವು. ಆದರೆ ನಮ್ಮ ಸಂವಿಧಾನ ಈ ದಿನ ಪ್ರತಿಯೊಬ್ಬರಿಗೂ ಒಂದೇ ಮತ ಟಾಟಾ, ಬಿರ್ಲಾ, ಅದಾನಿ, ಪ್ರಧಾನಿಗೂ ಒಂದೇ ಎಂದು ನಮ್ಮ ಸಂವಿಧಾನ ಹೇಳುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಸಾಮಾಜಿಕ ಪರಿವರ್ತನಾ ಸೇವಾ ಸಂಸ್ಥೆಯ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ ಇಂದಿನ ಮಕ್ಕಳೇ ಪ್ರಜೆಗಳು, ಸಮಾಜದಲ್ಲಿ ಪ್ರಜೆಗಳಾಗಲು ಕಾನೂನು ಮಾನವೀಯ ಮೌಲ್ಯಗಳ ಅಳವಡಿಕೆ ಅತ್ಯಗತ್ಯ. ತಾನು ತಪ್ಪು ಮಾಡದೇ, ಇನ್ನೊಬ್ಬರು ತಪ್ಪು ಮಾಡದಂತೆ ಕಾನೂನು ಚೌಕಟ್ಟಿನಲ್ಲಿ ಇರುವುದು ಜವಾಬ್ದಾರಿ. ಸಮಾಜವನ್ನು ಶಾಂತ ರೀತಿಯಿಂದ ಇಡಬೇಕು ಎಂದರು.

ಈ ಸಂದರ್ಭದಲ್ಲಿ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ. ಸರಿತಾರಾಜನಾಯ್ಕ, ಸದಸ್ಯರಾದ ಆರ್. ಬಸವರಾಜ್, ರಾಯಮ್ಮ, ಪಿಡಿಒ ಕೆ.ಓ. ಶಶಿಕಲಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್ ಬಸವರಾಜ್ ಹುರಿಕಡ್ಲೆ ಹಾಗೂ ಸಹ ಶಿಕ್ಷಕರು, ಹಾಲು ಒಕ್ಕೂಟ ಸಂಘದ ಅಧ್ಯಕ್ಷ ಎಚ್ ಮಲ್ಲಿಕಾರ್ಜುನ್, ಗ್ರಾ.ಪಂ. ದ್ವಿತೀಯ ದರ್ಜೆ ಸಹಾಯಕ ಎನ್. ಬಿ. ವೀರನಾಯಕ, ಬಿಲ್ ಕಲೆಕ್ಟರ್ ಎಂ. ಬಿ. ರಘು, ಕಾರ್ಯದರ್ಶಿ ಚಿದಾನಂದ, ನೆರೇಗಾ ಸಹಾಯಕ ರವಿ, ಆಶಾ ಕಾರ್ಯಕರ್ತೆರಾದ ಸಿ.ಕವಿತಾ, ಎನ್ ತಾರಮ್ಮ, ಕರಿಯಮ್ಮ,ಅಂಗನವಾಡಿ ಶಿಕ್ಷಕಿ ಕೆ. ಕವಿತಾ, ಹಾಗೂ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎನ್. ದೇವರಹಳ್ಳಿ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!