ಚಳ್ಳಕೆರೆ :
ಗ್ರಾಮ
ಆಡಳಿತಧಿಕಾರಿಗಳ ಸಂಘದಿಂದ ನಗರದ ತಹಸೀಲ್
ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಕಳೆದ ನಾಲ್ಕು ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ
ಅನಿರ್ಧಿಷ್ಟ ವಾದಿ
ಪ್ರತಿಭಟನೆ ನಡೆಸಿದರು.
ಗ್ರಾಮಾಡಳಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್
ಮಾತನಾಡಿ, ಕೆಲಸ ನಿರ್ವಹಿಸಲು ಬೇಕಾಗಿರುವ ಅತ್ಯಗತ್ಯ
ಅತ್ಯಾಧುನಿಕ ಸೌಲಭ್ಯ ನೀಡದೆ ಕೆಲಸ ಮಾಡುವಂತೆ
ಮೇಲಾಧಿಕಾರಿಗಳು ಒತ್ತಡ ಹೇರುವುದನ್ನು ವಿರೋಧಿಸಿ
ನಮ್ಮ ಬೇಡಿಕೆ ಈಡೇರುಸುವ ತನಕ ಅನಿರ್ದಿಷ್ಟ ದಿನಗಳ
ವರೆಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ
ನಡೆಸಲಾಗುವುದು.
ಇನ್ನೂ ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ, ನಿಮ್ಮ ನ್ಯಾಯಯುತ ಬೇಡಿಕೆಯನ್ನು ಪೂರೈಸಿಕೊಳ್ಳಿ, ಆದರೆ ಇದರ ಮಧ್ಯ ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸದೆ, ಅವರ ಕೆಲಸಗಳನ್ನು ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಜೀವ ಇಲ್ಲದ ಯಂತ್ರಗಳಿಗೆ ವಿಶ್ರಾಂತಿ
ಇದೆ. ಆದರೆ, ಕಂದಾಯ ಇಲಾಖೆಯಲ್ಲಿ ಕರ್ತವ್ಯ
ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗಿಲ್ಲ.
ಮೇಲಾಧಿಕಾರಿಗಳ ಪಾಲಿಗೆ ಯಂತ್ರಕ್ಕಿಂತಲೂ
ಕಡೆಯಾಗಿದ್ದೇವೆ. ಈ ಇಲಾಖೆಯಲ್ಲಿ ಕೆಲಸ
ನಿರ್ವಹಿಸುತ್ತಿರುವ ನಮಗೆ ಆರೋಗ್ಯ ತಪಾಸಣೆ
ಮಾಡಿದರೆ ಬಹುತೇಕ ನೌಕರರಿಗೆ ಬಿಪಿ, ಶುಗರ್
ಬಂದಿರುವ ಬಗ್ಗೆ ಅನುಮಾನಗಳು ಬರುತ್ತವೆ. ಮಾನಸಿಕ
ಒತ್ತಡದಲ್ಲಿ ಕೆಲಸ ನಿರ್ವಹಿಸುವಾಗ ಹೆಚ್ಚು
ಕಡಿಮೆಯಾದರೆ ಅದಕ್ಕೆ ನಮ್ಮದೇ ತಲೆ ತಂಡವಾಗುತ್ತದೆ.
ಏನಾದರೂ ನಮಗೆ ಹೆಚ್ಚು ಕಡಿಮೆಯಾದರೆ ನಮ್ಮ
ಕುಟುಂಬದ ನಿರ್ವಹಣೆ ಗತಿ ಏನು ಎಂದು ಆಕ್ರೋಶ
ವ್ಯಕ್ತಪಡಿಸಿದರು.
ಶ್ರೇಯಾಂಕ ಗಳಿಸಬೇಕು ಎನ್ನುವ ಉದ್ದೇಶದಿಂದ
ಮೇಲಾಧಿಕಾರಿಗಳು ಒತ್ತಡ ಹಾಕಿ ಬಿಡುವಿಲ್ಲದೆ
ದುಡಿಸಿಕೊಳ್ಳುತ್ತಾರೆ. ವಿಚಿತ್ರ ಎಂದರೆ ಕಚೇರಿಗಳಿಗೆ ವೇಳೆ
ಮುಗಿದ ಮೇಲೆ ಮೀಟಿಂಗ್ ಮಾಡುವುದು ಅಲ್ಲದೆ ರಜೆ
ದಿನದ ಹಿಂದಿನ ದಿನದ ಸಂಜೆ ಮೀಟಿಂಗ್ ಮಾಡಿ, ಇದೆಲ್ಲ
ಗೊತ್ತಿಲ್ಲ ನಾಳೆ ಈ ಕೆಲಸ ಪೂರ್ಣಗೊಳಿಸಬೇಕು. ಇಲ್ಲದೆ
ಹೋದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು
ಎನ್ನುವ ಭಯದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ
ಎಂದು ಕಂದಾಯ ನೌಕರರ ಅಳಲಾಗಿದೆ.
ರಜೆ ದಿನಗಳಲ್ಲಿ ನಮ್ಮ ವೈಯಕ್ತಿಕ ಕೆಲಸಗಳಿಗೆ ಗಮನ
ಕೊಡಲಾಗುತ್ತಿಲ್ಲ. ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ
ಸಂತೋಷದಿಂದ ಕಾಲ ಕಳೆಯದಂತಾಗಿದೆ. ಇದರಿಂದ
ಕುಟುಂಬದಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ ಎಂದು
ನೋವು ತೋಡಿಕೊಂಡರು
ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ
ಅಂದಾಜು 17ಕ್ಕೂ ಅಧಿಕ ಮೊಬೈಲ್ ಅಥವಾ ವೆಬ್
ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ
ಹೇರುತ್ತಿದ್ದಾರೆ.
ಇದನ್ನು ನಿರ್ವಹಿಸಲು ಬೇಕಾದ ಮೊಬೈಲ್,
ಲ್ಯಾಪ್ ಟಾಪ್ ಅತ್ಯಾಧುನಿಕ ಉಪಕರಣ ನೀಡುತ್ತಿಲ್ಲ
ಎಂದು ಅಳಲು ತೋಡಿಕೊಂಡರು ವೃತ್ತಕ್ಕೆ ಒಂದರಂತೆ
ಮೊಬೈಲ್, ಲ್ಯಾಪ್‌ಟಾಪ್, ಗೂಗಲ್ ಕ್ರೋಮ್‌ಬುಕ್,
ಪ್ರಿಂಟರ್, ಇಂಟರ್‌ನೆಟ್ ಸೌಲಭ್ಯ ನೀಡುವವರೆಗೆ ಕೆಲಸ
ಮಾಡುವುದಿಲ್ಲ, ಆಧಾರ್‌ಡ್, ಲ್ಯಾಂಡ್ ಬೀಟ್,
ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್
ಅಪ್ಲಿಕೇಷನ್, ಪೌತಿ ಆಂದೋಲನ ಆಪ್, ವಿವಿಧ ಮೂಲ
ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಇದೇ ಸಂಧರ್ಭದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.

