ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಾಕ್ ಮತ್ತು ತುಳುಕು ಮತ್ತು ನಾಯಕನಹಟ್ಟಿ ಹೋಬಳಿಯ ಯುವ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಮಧು ತೊರೆಕೊಲಮ್ಮನಹಳ್ಳಿ ಹಾಗೂ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ನೂತನ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಮಲ್ಲೂರಹಳ್ಳಿ ಆಯ್ಕೆ.
ನಾಯಕನಹಟ್ಟಿ ಹೋಬಳಿಯ ಕರ್ನಾಟಕ ರಾಜ್ಯ ರೈತ ಸಂಘ ವಾಸುದೇವ್ ಮೇಟಿ ಬಣದ ವತಿಯಿಂದ ಸನ್ಮಾನಿಸಲಾಯಿತು.
ನಾಯಕನಹಟ್ಟಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚಿಗೆ ನಡೆದಂತಹ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಾಕ್ ಹಾಗೂ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಯುವ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಮಧು ತೊರೆಕೋಲಮ್ಮನಹಳ್ಳಿ ಇವರಗಳು ಆಯ್ಕೆಯಾಗಿದ್ದು, ಮತ್ತು ಸಂಜೀವಿನಿ ಜೀವನಕ್ಷಕ ಟ್ರಸ್ಟ್ ನ ನೂತನ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ರಾಗಿ ಆಯ್ಕೆಯಾದ ಪ್ರಸನ್ನ ಕುಮಾರ್ ಮಲ್ಲೂರಹಳ್ಳಿ ರವರನ್ನು ನಾಯಕನಹಟ್ಟಿ ಹೋಬಳಿಯ ಕರ್ನಾಟಕ ರಾಜ್ಯ ರೈತ ಸಂಘದ ವಾಸುದೇವ್ ಮೇಟಿ ಬಣದ ವತಿಯಿಂದ ಸನ್ಮಾನಿಸಲಾಯಿತು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಾಕ್ ಮಾತನಾಡಿ ನಾಯಕನಹಟ್ಟಿ ಹೋಬಳಿ ಮತ್ತು ತಳಕು ಹೋಬಳಿ ಹಾಗೂ ಕ್ಷೇತ್ರದ ಯುವಕರು ಇವತ್ತಿನ ದಿನ ನನಗೆ ವೋಟ್ ಮಾಡಿ ಉಪಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ನನಗೆ ಸನ್ಮಾನಿಸಿದ್ದಕ್ಕೆ ಧನ್ಯವಾದಗಳುನ್ನು ಅರ್ಪಿಸಿದರು.
ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಯುವ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷ ಮಧು ತೊರೆಕೋಲಮ್ಮನಹಳ್ಳಿ ಮಾತನಾಡಿ ತಳುಕು ನಾಯಕನಹಟ್ಟಿ ಹೋಬಳಿಯ ಎಲ್ಲಾ ಪ್ರೀತಿಯ ಯುವಕರಗಳು ನನಗೆ ಪ್ರೋತ್ಸಾಹ ನೀಡಿ ತಮ್ಮ ಮತಗಳನ್ನು ನೀಡಿದ್ದಕ್ಕೆ ಧನ್ಯವಾದಗಳು ಮುಂದಿನ ದಿನಗಳಲ್ಲಿ ಯುವಕರಿಗಾಗಿ ಯಾವಾಗಲೂ ಶ್ರಮಿಸುತ್ತೇನೆ. ನನ್ನ ಸನ್ಮಾನಿಸಿದ ಎಲ್ಲ ನನ್ನ ಪ್ರೀತಿಯ ರೈತ ಸಂಘದವರಿಗೆ ಧನ್ಯವಾದಗಳು ಅರ್ಪಿಸುತ್ತಾ ನಿಮ್ಮ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವಾಸುದೇವ್ ಮೇಟಿ ಬಣದ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ, ಜಿಲ್ಲಾ ಕಾರ್ಯದರ್ಶಿ ನವೀನ್ ಮದಕರಿ, ನಾಯಕನಹಟ್ಟಿ ನಗರ ಘಟಕದ ಗೌರವಾಧ್ಯಕ್ಷ ನಾಗರಾಜ್ ತಿಮ್ಮಪ್ಪನಹಳ್ಳಿ,ನಾಯಕನಹಟ್ಟಿ ಹೋಬಳಿ ಉಪಾಧ್ಯಕ್ಷ ವೈ ಬಸವರಾಜ್ ತಿಮ್ಮಪ್ಪಯ್ಯನಳ್ಳಿ , ರಘು ನಾಯಕನಹಟ್ಟಿ , ಯುವ ಕಾಂಗ್ರೆಸ್ ಕಾರ್ಯದರ್ಶಿ ಭಾಷಾ ಚಿತ್ರದುರ್ಗ , ಅಶೋಕ್ ಮತ್ತು ನಿಸರ್ಗ ಯುವ ಸ್ನೇಹಿ ತಂಡ ಚಿತ್ರದುರ್ಗದ ಅಧ್ಯಕ್ಷರಾದ ವೀರೇಶ್ ಇನ್ನು ಮುಂತಾದವರು ಹಾಜರಿದ್ದರು.

