ಚಳ್ಳಕೆರೆ : ನಿಧಿ ಆಸೆಗಾಗಿ ಪಶ್ಚಿಮ ದಿಕ್ಕಿಗೆ ಹೋಗಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ
ಎನ್ನುವ ಜ್ಯೋತಿಷಿ ಮಾತು ನಂಬಿ ಅಮಾಯಕನನ್ನು ಕೊಲೆ ಮಾಡಿರುವ
ಅಮಾನವೀಯ ಘಟನೆ ಪರಶುರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ
ನಡೆದಿದೆ.
ಪಾವಗಡದ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ
ಮಾಡಿಕೊಂಡಿದ್ದ ಆನಂದರೆಡ್ಡಿ ಎಂಬ ವ್ಯಕ್ತಿ ಈ ಕೊಲೆ ಮಾಡಿದ್ದಾನೆ.
ಪರಶುರಾಂಪುರ ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲಿಯುವ ಕಾಯಕ
ಮಾಡಿಕೊಂಡಿದ್ದ ಅಂದಾಜು 52 ವರ್ಷದ ಪ್ರಭಾಕರ್ ಕೊಲೆಯಾದ ವ್ಯಕ್ತಿ.
ಚೌಳೂರು ಜೆ.ಜೆ.ಕಾಲೋನಿಯಲ್ಲಿ ವಾಸವಾಗಿದ್ದ ಪ್ರಭಾಕರ್, ಫೆಬ್ರವರಿ
ಭಾನುವಾರ ಸಂಜೆ ಕೆಲಸ ಮುಗಿಸಿ ಮನೆಗೆ ನಡೆದುಕೊಂಡು
ಹೋಗುತ್ತಿದ್ದಾಗ ರಸ್ತೆಯಲ್ಲಿ ತಿರುಗಾಡುತ್ತಿದ್ದ ಆನಂದರೆಡ್ಡಿ ಬೈಕಿನಲ್ಲಿ
ಸಾಲದ ಕಾರಣಕ್ಕೆ ಜ್ಯೋತಿಷಿ ಮಾತು ನಂಬುತ್ತಿದ್ದ ಕೊಲೆಗಾರ:
ಹೋಟೆಲ್‌ನಲ್ಲಿ ಅಡುಗೆ ಭಟ್ಟನಾಗಿದ್ದ ಆನಂದರೆಡ್ಡಿ ಆಂಧ್ರಪ್ರದೇಶದ
ಕುಂದಾರ್ಪಿ ಮಂಡಲದ ಕದರಾಂಪಲ್ಲಿ ಗ್ರಾಮದವನು.
ಹಣಕಾಸಿನ ಸಮಸ್ಯೆಯ ಸುಳಿಗೆ ಸಿಲುಕಿದ್ದ ಈತ ಪದೇ ಪದೇ ಜ್ಯೋತಿಷಿ
ಬಳಿಗೆ ಹೋಗುತ್ತಿದ್ದ ಪಶ್ಚಿಮಕ್ಕೆ ಹೋಗಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ
ಎಂಬ ಮಾತು ನಂಬಿ, ಪಾವಗಡ ಕಡೆಯಿಂದ ಪರಶುರಾಂಪರ ಕಡೆಗೆ
ಬಂದು ಮಧ್ಯಾಹ್ನದಿಂದಲೇ ಅನುಮಾನಾಸ್ಪದವಾಗಿ ತಿರುಗಾಡಿದ್ದಾನೆ.
ಸಂಜೆ ಹೊತ್ತಿಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಪ್ರಭಾಕರ್ ಸಿಕ್ಕಿದ್ದು
ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.

