ಸಂಭ್ರಮದ ಕಾವಲು ಚೌಡೇಶ್ವರಿ ಜಾತ್ರೆ.

ನಾಯಕನಹಟ್ಟಿ: ನಾಯಕನಹಟ್ಟಿ ಸಮೀಪದ ಹಿರೇಕೆರೆ ಕಾವಲಿನಲ್ಲಿ ಬುಡಕಟ್ಟು ಜನರ ಆರಾಧ್ಯ ದೈವ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಈಚೆಗೆ ವಿಜೃಂಭಣೆಯಿಂದ ನಡೆಯಿತು.

ಹಲವು ಪವಾಡ ಹಾಗೂ ಮಹಿಮೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಚೌಡೇಶ್ವರಿ ದೇವಿಯು ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೇವತೆಯಾಗಿದ್ದಾಳೆ. ಜಾತ್ರೆಯ ಸಂದರ್ಭದಲ್ಲಿ ಬುಡಕಟ್ಟು ಸಂಸ್ಕೃತಿಯ
ಆಚರಣೆಗಳು ಅನಾವರಣಗೊಂಡವು. ನಾಯಕನಹಟ್ಟಿ ಸಮೀಪದ ಹಿರೆಕೆರೆ ಕಾವಲಿನಲ್ಲಿ ಚೌಡೇಶ್ವರಿ ಜಾತ್ರೆ ನಡೆಯಿತು.
ಎತ್ತಿನಹಟ್ಟಿ ಗೌಡರ ಮನೆಯಿಂದ ಬಲಿ ಅನ್ನು ತರಲಾಯಿತು. ಹಾಗೂ ಜೋಗಿಹಟ್ಟಿ ಗ್ರಾಮಸ್ಥರು ಇಂದು ಕಾಸಲು ಮೀಸಲು, ಮೊಸರು ಕುಂಭ, ಜಿನಿಗೆಹಾಲು ತಂದು ದೇವರಿಗೆ, ರಥಕ್ಕೆ ಹಾಗೂ ಪಾದಗಟ್ಟೆ ಬಳಿ ಎಡೆಹಾಕಿದರು.. ತಪ್ಪಡಿ, ಕಹಳೆ, ಉರುಮೆ ಸೇರಿ ಹಲವು ಜಾನಪದ ವಾದ್ಯಗಳು ಮತ್ತು ಪಂಜು, ನಂದಿಕೋಲುಗಳ ಮೆರವಣಿಗೆ
ನಡೆಯಿತು.
ರಥೋತ್ಸವಕ್ಕೂ ಮೊದಲು ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆಯಿತು. ನಲಗೇತನಹಟ್ಟಿ- ಗ್ರಾಮದ ಬಿ. ಸಿ. ಚನ್ನಕೇಶವ ನವರು ₹. 72. ಸಾವಿರಕ್ಕೆ ತೆಗೆದುಕೊಂಡರು. ಹರಾಜಿನಲ್ಲಿ ನಂತರ ಮಹಾಮಂಗಳಾರತಿ ರಥೋತ್ಸವಕ್ಕೆ ಚಾಲನ
ಮಾಡಿ ನೀಡಲಾಯಿತು.

ಇದೇ ವೇಳೆ ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಪಟೇಲ್‌ , ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಪತ್ನಿ ಗಾಯಿತ್ರಮ್ಮ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುರೆಡ್ಡಿ, ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಂ.ವೈ.ಟಿ. ಸ್ವಾಮಿ, ಕೆಎಎಸ್ ನಿವೃತ್ತ ಅಧಿಕಾರಿ ಎನ್ ರಘುಮೂರ್ತಿ ಮುಖಂಡರಾದ ಜಿ.ಟಿ. ದೇವರಾಜ, ಜೆ.ಪಿ. ರವಿಶಂಕರ್, ರೇಖಲಗೆರೆ ಎಂ. ಚಿನ್ನಯ್ಯ, ಭೀಮಗೊಂಡನಹಳ್ಳಿ ಹನುಮಣ್ಣ, ಕಾಕಸೂರಯ್ಯ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ. ವೀರಭದ್ರಪ್ಪ, ಮೊಳಕಾಲ್ಮುರು ಜೆಡಿಎಸ್ ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ, ನಲಗೇತನಹಟ್ಟಿ ನಲ್ಲನ ದೊಡ್ಡ ಬೋರಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ. ಎನ್. ಮುತ್ತಯ್ಯ, ಜಿ. ವೈ. ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯರಾದ ಜೆ.ಆರ್. ರವಿಕುಮಾರ್ ಎಂ ಟಿ ಮಂಜುನಾಥ್, ವಿನುತಾ, ನಾಯಕನಹಟ್ಟಿ ಪಟ್ಟಣದ ನಾಡಕಚೇರಿ ಉಪತಾಶಿಲ್ದಾರ್ ಬಿ ಶಕುಂತಲಾ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ ಬಸಪ್ಪ ನಾಯಕ , ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್, ಹಾಗೂ ಸಿಬ್ಬಂದಿಗಳು ಸೇರಿದಂತೆ ಹೋಬಳಿಯ ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಹೋಬಳಿಯ ವಿವಿಧ ಹಳ್ಳಿಗಳ ಭಕ್ತಾದಿಗಳು ಇದ್ದರು.

About The Author

Namma Challakere Local News
error: Content is protected !!