ಚಳ್ಳಕೆರೆ : ಸಾರ್ವಜನಿಕರ ಸ್ಪಂದನೆಗೆ ಚಳ್ಳಕೆರೆ ನಗರಸಭೆ ಸದಾ ಸ್ಪಂದಿಸುತ್ತ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದಂತಹ ಮೂಲಭೂತ ಸೌಲಭ್ಯಗಳನ್ನು ಹೊದಗಿಸುವುದರ ಮೂಲಕ ನಗರಸಭೆ ಜನಸ್ನೇಹಿ ನಗರಸಭೆಯಾಗಿದೆ ಎಂದು ನಗರಸಭೆ ಅಧ್ಯಕ್ಷೆ ಜೈತುಂಬಿ ಮಾಲೀಕ್ ಸಾಬ್ ಹೇಳಿದರು.
ಅವರು ನಗರದ ಖಾಸಗಿ ಬಸ್ ನಿಲ್ದಾಣ ಸಮೀಪ ಸ್ವಚ್ಛ ಭಾರತ್ ಮಿಷನ್ ಎಸ್ ಬಿ ಎಂ ಯೋಜನೆಯಲ್ಲಿ ಸುಮಾರು ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಮಹತ್ವಾಕಾಂಕ್ಷಿ ಸಾರ್ವಜನಿಕ ಶೌಚಾಲಯ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು,
ನಗರ ಪ್ರದೇಶ ಬೆಳದಂತೆ ಜನರಿಗೆ ಅಗತ್ಯವಾಗಿ ಕುಡಿಯುವ ನೀರು, ಶೌಚಾಲಯ ಬೀದಿ ದೀಪ ಹೀಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವುದು ನಗರ ಸಭೆಯ ಆದ್ಯ ಕರ್ತವ್ಯ ಆದ್ದರಿಂದ ಈಗಾಗಲೇ ನಗರದಲ್ಲಿ ಪೊಲೀಸ್ ಉಪ ವಿಭಾಗ ಅಧಿಕಾರಿಗಳ ಕಚೇರಿ ಮುಂಭಾಗ ಸಮೀಪದಲ್ಲಿ ಸು.18 ಲಕ್ಷ ರೂ.ವೆಚ್ಚದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಸಾರ್ವಜನಿಕ ಶೌಚಾಲಯ, ಹಾಗೂ 30 ಲಕ್ಷ ವೆಚ್ಚದಲ್ಲಿ ಮಹಾಪ್ರಕಾಶ್ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗುತ್ತಿರುವುದು ಜನರ ಉಪಯೋಗಕ್ಕೆ ಅನುಕೂಲವಾಗಿದೆ ಎಂದರು.
ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ ಮಾಲೀಕ್ ಸಾಬ್, ಉಪಾಧ್ಯಕ್ಷೆ ಸುಮಾ ಭರಮಯ್ಯ, ಸದಸ್ಯ ರಾಘವೇಂದ್ರ, ರಮೇಶ್ ಗೌಡ, ಜಯಣ್ಣ, ಸುಜಾತ, ಪಾಲಯ್ಯ, ಖಾದರ್, ಪೌರಾಯುಕ್ತ ಜಗರೆಡ್ಡಿ, ಪರಿಸರ ಇಂಜಿನಿಯರ್ ನರೇಂದ್ರ ಬಾಬು, ನಗರಸಭೆ ಇಂಜಿನಿಯರ್ ವಿನಯ್, ಚೇತನ, ಬೀದಿ ಬದಿ ಸಂಘದ ಅಧ್ಯಕ್ಷ ಶಿವರುದ್ರಪ್ಪ, ಉಪಾಧ್ಯಕ್ಷ ಪಟೇಲ್, ಇತರರು ಪಾಲ್ಗೊಂಡಿದ್ದರು.

