ಚಳ್ಳಕೆರೆ :

ತಳಕು ಹೋಬಳಿಯ ಗ್ರಾಮಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದ ಬೆಳೆಗಳು ಒಣಗುತ್ತಿದ್ದು ಇದರಿಂದ ಕಂಗೆಟ್ಟ ನೂರಾರು ರೈತರು ಇಂದು ತಳುಕು ಬೆಸ್ಕಾಂ ಕಛೇರಿ ಗೆ ಮುತ್ತಿಗೆ ಹಾಕಿದರು…

ಈ ವೇಳೆ ಮಾತನಾಡಿದ ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಈಗಾಗಲೇ ತಳಕು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದ ಕಾರಣ ಇತರ ನೀರಾವರಿ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿದ್ದು. ಜಾನುವಾರಗಳಿಗೆ ಕುಡಿಯುವ ನೀರಿಗೆ ಸಹ ತೊಂದರೆಯಾಗಿದೆ.

ಅದರಿಂದ ನೊಂದ ರೈತರು ಇಂದು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ. ಅಧಿಕಾರಿಗಳು ರೈತರ ಕೊಳವೆ ಬಾವಿಗಳಿಗೆ ಸಮರ್ಪಕ ವಿದ್ಯುತ್ ನೀಡುವವರೆಗೂ ನಾವು ರೈತರು ಎಲ್ಲೂ ಹೋಗುವುದಿಲ್ಲ. ನೀವು ಅಧಿಕಾರಿಗಳು ಸಹ ಹೊರ ಹೋಗದಂತೆ ನಮಗೆ ನ್ಯಾಯ ಕೊಡಬೇಕು ಎಂದು ಎಚ್ಚರಿಕೆ ನೀಡಿದರು..

ಬೇಡರಹಳ್ಳಿ ಬಸವರೆಡ್ಡಿ ಮಾತನಾಡಿ. ಈ ಭಾಗದಲ್ಲಿ ನಿರಂತರವಾಗಿ ಅಗಲ ವತ್ತಿನಲ್ಲೇ ಗ್ರಾಮಗಳಲ್ಲಿ ವಿದ್ಯುತ್ ಪೋಲಾಗುತ್ತಿದ್ದು ಇದನ್ನ ಕಂಡು ಕಾಣದಂತಿರುವ ಅಧಿಕಾರಿಗಳು ರೈತರ ಪಂಪ್ಸೆಟ್ಟುಗಳಿಗೆ ಸರಿಯಾದ ವಿದ್ಯುತ್ ನೀಡದ ಕಾರಣ ಬೆಳೆಗಳು ಸಂಪೂರ್ಣ ಒಣಗುತ್ತಿವೆ.

ವಲಸೆ ಗ್ರಾಮದ ರೈತ ಆಶ್ವತ ರೆಡ್ಡಿ ವಿದ್ಯುತ್ ಕಣ್ಣ ಮುಚ್ಚಾಲೆ ಆಟದಲ್ಲಿ ನಮ್ಮ ಬೆಳೆಗಳು ಸಂಪೂರ್ಣ ಒಣಗಿದ್ದು ಅಧಿಕಾರಿಗಳು ನಮಗೆ ಖರ್ಚು ಕೊಡ್ತಾರ. ಸಾಲ ಶೂಲ ಮಾಡಿ, ಬೀಜ ತಂದು ಬೆಳೆ ಬೆಳೆದು ಪಸಲಿಗೆ ಬಂದ ಬೆಳೆಗಳು ಒಣಗುವುದರಿಂದ ರೈತರು ವಿಷ ಕುಡಿವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ಪಂಪ್ಸೆಟ್ಟುಗಳಿಗೆ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಒತಾಯಿಸಿದರು…

ರೈತ ಸಂಘ ಹಸಿರು ಸೇನೆ ತಾಲೂಕ ಅಧ್ಯಕ್ಷರಾದ ಶ್ರೀಕಂಠ ಮೂರ್ತಿ, ಗೌರವಾಧ್ಯಕ್ಷರಾದ ಚನ್ನಕೇಶಮೂರ್ತಿ, ನಾಗೇಂದ್ರಪ್ಪ ಆಶ್ವತ್ ರೆಡ್ಡಿ,ರುದ್ರಪ್ಪ ,ಹನುಂತರೆಡ್ಡಿ

ವಲಸೆ ,ತಿಮ್ಮನಹಳ್ಳಿ ತಾಂಡ,ತಿಮ್ಮನಹಳ್ಳಿ ಚಿಕ್ಕಹಳ್ಳಿ, ಬೇಡರೆಡ್ಡಿಹಳ್ಳಿ,ಗುಡ್ಡದ ಕಪಿಲೆ,ತಳಕು ಬಂಜಗೆರೆ ಸೇರಿದಂತೆ ರೈತರು ಇದ್ದರು….

About The Author

Namma Challakere Local News
error: Content is protected !!