ಚಳ್ಳಕೆರೆ :

ಗ್ರಾಮೀಣ ಪ್ರದೇಶದಲ್ಲಿ ಭೂ ವ್ಯಾಜ್ಯಗಳಿಂದ ಅನೇಕ ಕುಟುಂಬಗಳು ಪೋಲೀಸ್, ಕೋರ್ಟ, ಮೆಟ್ಟಿಲಿರುವ ಪ್ರಕರಣಗಳು ಕಾಣಬಹುದಾಗಿದೆ,

ಇದರಿಂದ ಅನಾದಿಕಾಲದಿಂದಲೂ ಅವಿಭಕ್ತ ಕುಟುಂಬವಾಗಿದ್ದ ಕುಟುಂಬಗಳು ಇಂದು ವಿಭಕ್ತ ಕುಟುಂಬಗಳು ಹಾಗಿ ಪರಿವರ್ತನೆ ಹೊಂದುತ್ತಾವೆ,

ಇಂತಹದೊಂದು ಘಟನೆ ಬೆಳಕಿಗೆ ಬಂದ ತಕ್ಷಣವೇ ಎಚ್ಚತ್ತ‌ ಕಂದಾಯ. ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಿ ಅಣ್ಣ ತಮ್ಮಂದಿರ ಜಮೀನು ಹದ್ದು ಬಸ್ತು ಮಾಡಿ ಗಡಿ ಗುರುತಿಸಿ ಅಣ್ಣ ತಮ್ಮರ ಮಧ್ಯೆ ಶಾಂತಿ ಕಾಪಾಡಿದ್ದಾರೆ.

ಚಳ್ಳಕೆರೆ ತಾಲೂಕಿನ ತಳಕು ಹೋಬಳಿ
ವ್ಯಾಪ್ತಿಯ ಹನುಮಂತನಹಳ್ಳಿ ಗ್ರಾಮದ
ರಿ.ಸ.ನಂ:13/1, 6/1 ರ ಜಮೀನಿನ ಗಡಿ ಗುರುತಿಸಿ
ಕಲ್ಲುಗಳನ್ನು
ಹಾಕಿಸುವಂತೆ ಚಿತ್ರದುರ್ಗ ಜಿಲ್ಲೆಗೆ ಉಪಲೋಕ್ತ ರು ಭೇಟಿ
ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲು
ಸ್ವೀಕರಿಸುವಾಗ ಗ್ರಾಮದ ನಿವೃತ್ತ ಶಿಕ್ಷಕ ಕೆ.ಚಂದ್ರಪ್ಪ
ರಿ.ಸ.ನಂ:13/1, 6/1 ರ ಜಮೀನಿನ ಗಡಿ ಗುರುತಿಸಿ
ಕಲ್ಲುಗಳನ್ನು
ಹಾಕಿಸಿಕೊಡುವಂತೆಲೋಕಾಯುಕ್ತರಿಗೆ ದೂರು
ನೀಡಿದ್ದರು.

ಲೋಕಾಯುಕ್ತರ ಆದೇಶದಂತೆ ಮಂಗಳವಾರ
ದೂರುದಾರ ಚಂದ್ರಪ್ಪ ಜಮೀನಿಗೆ ಜೆಸಿಬಿ ಯಂತ್ರದೊಂದಿಗೆ
ತಳಕು ಪೋಲಿಸ್ ಅಧಿಕಾರಿಗಳ ರಕ್ಷಣೆಯಲ್ಲಿ ತಹಶೀಲ್ದಾರ್
ರೇಹಾನ್ ಪಾಷ, ಉಪತಹಶೀಲ್ದಾರ್ ರಫಿಸಾಬ್, ಕಂದಾಯ
ನಿರೀಕ್ಷಕ ಲಿಂಗೇಗೌಡ, ತಳಕು ಪೋಲಿಸ್ ಅಧಿಕಾರಿಗಳು
ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ
ಜಮೀನಿನ ಗಡಿ ಗುರುತಿಸಿ ಗಡಿಕಲ್ಲು ಹಾಕಿಸಿ ಮುಕ್ತಿ ಕಾಣಿಸಿದ್ದಾರೆ.

ಇನ್ನೂ ತಹಶೀಲ್ದಾರ್ ರೇಹಾನ್ ಪಾಷ ರವರು ಅಣ್ಣತಮ್ಮರಿಗೆ ಸೌಹರ್ದಾ ಜೀವನ ನಡೆಸುವಂತೆ ಸಲಹೆ ನೀಡಿ, ಭೂಮಿಯ ಮೇಲೆ ಯಾರು ಶಾಶ್ವತವಾಗಿ ಇರುವುದಿಲ್ಲ ಇರುವ ತನಕ ಸಂಬಂಧ‌ ಮಾತ್ರ ಶಾಶ್ವತವಾಗಿ ಇರುತ್ತದೆ, ಆದ್ದರಿಂದ ಜಗಳ ಬಿಟ್ಟು ಸೌಹಾರ್ದ ಜೀವನ ನಡೆಸಿ ಎಂದು ಸಲಹೆ ನೀಡಿದರು.

About The Author

Namma Challakere Local News
error: Content is protected !!