ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ
ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ, ಸಂಘದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಮುಕುಂದ್ ಆರ್, ಹಾಗೂ ಉಪಾಧ್ಯಕ್ಷರಾಗಿ ಶಿವಣ್ಣ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರು ತಾಲೂಕಿನ ಚಿಕ್ಕಮಧುರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ
2024 25 ನೇ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಹಿರಿಯ ನಿರ್ದೇಶಕರುಗಳ ಸಲಹೆ ಮೇರೆಗೆ ಚುನಾವಣೆ ನಡೆಸದೆ ಅವಿರೋಧವಾಗಿ ಅಧ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ರೇವಣ್ಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್.ಮಲ್ಲೆಶಪ್ಪ ಹೇಳಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು, ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಅಧ್ಯಕ್ಷರಾಗಿ ಆರ್.ಮುಕುಂದ್, ಉಪಾಧ್ಯಕ್ಷರಾಗಿ ಬಿ. ಶಿವಣ್ಣ, ನಿರ್ದೇಶಕರಾಗಿ ಬಿ. ಮಲ್ಲಿಕಾರ್ಜುನಪ್ಪ, ಟಿ. ನಿಜಲಿಂಗಪ್ಪ, ಯು. ಸಿದ್ದೇಶ್, ಹೆಚ್. ಆಂಜನೇಯ, ಸಿಎಲ್. ಸುರೇಶ್, ಟಿ .ನಾಗಭೂಷಣ್ , ಪ್ರಸನ್ನ ಕುಮಾರ್, ಡಿಎಸ್ .ಸುಧಾಮಣಿ, ಜಯಮ್ಮ, ಹೆಚ್ಸಿ.ತಿಪ್ಪೇಸ್ವಾಮಿ, ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕರು,
ಇನ್ನೂ ನಿರ್ದೇಶಕರು ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಎನ್ ಸಿ .ನೀಲಪ್ಪ ಮತ್ತು ರಿಟ ರ್ನಿಂಗ್ ಆಫೀಸರ್, ಸಿಡಿಓ ಸಿ ಡಿ ಸಿ ಸಿ ಬ್ಯಾಂಕ್ ಮೇಲ್ವಿಚಾರಕರು ಮತ್ತು ಚಿಕ್ಕಮದುರೆ ಸಹಕಾರ ಸಂಘದ ಸಿಬ್ಬಂದಿ ವರ್ಗ ಇತರರು ಇದ್ದರು

