filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ಚಳ್ಳಕೆರೆ : ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯ ಕ್ರೀಡಾ ಕೂಟದಲ್ಲಿ ಗೆಲುವು ಸಾಧಿಸಿದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ : ಟಿಪಿಓ.ಸುನಿಲ್ ನಾಯ್ಕ,

ಚಿಕ್ಕ ವಯಸ್ಸಿನಲ್ಲಿ ಸಾಧನೆಯ ಬೆನ್ನತ್ತಿದ್ದ ಹೊಂಗಿರಣ ಶಾಲಾ ಮಕ್ಕಳು

ಚಳ್ಳಕೆರೆ : ಮುಗ್ದ ವಹಿಯಸ್ಸಿನಲ್ಲೆ ಮಕ್ಕಳು ಪ್ರಶಸ್ತಿ , ಸನ್ಮಾನಗಳನ್ನು ಪಡೆಯುತ್ತಾ ಸಾಧನೆಯ ಬೆನ್ನತ್ತಿದರೆ ಅವರ ಜೀವನದಲ್ಲಿ
ಮುಂದೆಯೂ ಕೂಡ ಸಾಧಿಸುವ ಛಲವಿರುತ್ತದೆ ಎಂದು
ಟಿಪಿಓ ಸುನಿಲ್ ನಾಯ್ಕ್ ‌ಹೇಳಿದರು.

ಅವರು ನಗರದ ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಶಾಲಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪದಕಗಳನ್ನು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,

ಚಿಕ್ಕ ವಯಸ್ಸಿನಲ್ಲೆ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ
ಎಲ್ಲಾ ಮಕ್ಕಳು ಭಾಗವಹಿಸುವ ಮೂಲಕ ಪ್ರಶಸ್ತಿಯ ಹಾದಿಯಲ್ಲಿ ಸಾಗಬೇಕು, ಈ ಶಾಲೆ ಅತೀ ಕಡಿಮೆ ಅವಧಿಯಲ್ಲಿ ಉತ್ತಮವಾದ ಸಾಧನೆಯ ಪಥದಲ್ಲಿ ಸಾಗುತ್ತದೆ ಎಂದರು.

ದೈಹಿಕ ಶಿಕ್ಷಣದ ನಿರ್ದೇಶಕರಾದ ಶ್ರೀನಿವಾಸ್ ಮಾತನಾಡಿ,
ಇಂದಿನ ಆಧುನಿಕ ಸ್ಪರ್ಧಾ ಯುಗದಲ್ಲಿ ಪೋಷಕರು ಮಕ್ಕಳ ಮೇಲೆ ಕೇವಲ ಅಂಕಗಳಿಗೊಸ್ಕರ ಮಕ್ಕಳಿಗೆ ಒತ್ತಡ ಹೇರದೆ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಬಾವ ಬೆಳೆಸಬೇಕು,
ಇಂದಿನ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬರುವಂತೆ ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಪೋಷಕರು ಬೆಳೆಸಬೇಕು, ಮಕ್ಕಳ ಮೊದಲ ಶಾಲೆ ಮನೆ, ಕೇವಲ ಶಿಕ್ಷಕರ ಮೇಲೆ ಅವಲಂಬಿತವಾಗದೆ, ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿ ಎಂಬುದು ಎಲ್ಲಾ ಪೋಷಕರು ಮನಗಾಣಬೇಕು ಎಂದರು.

ಇದೇ ಸಂಧರ್ಭದಲ್ಲಿ ಹೊಂಗಿರಣ ಇಂಟರ್ನ್ಯಾಷನಲ್ ಶಾಲಾ ಆಡಳಿತದ ಗೌರವ ಅಧ್ಯಕ್ಷ ಡಿ.ನಾಗಪ್ಪ, ಅಧ್ಯಕ್ಷರಾದ ರಾಜೇಶ್ ಗುಪ್ತ, ಉಪಾಧ್ಯಕ್ಷ ಮಧುಸೂದನ್, ಟ್ರಸ್ಟಿಗಳಾದ ಡಿ.ಶಿವಪ್ರಸಾದ್, ಆಡಳಿತ ಅಧಿಕಾರಿ ಮಹಾದೇವ ಕುಮಾರ್ ಶೌರಿ, ಮುಖ್ಯ ಶಿಕ್ಷಕರಾದ ಬಿವಿ.ಪ್ರಸಾದ್, ಹಾಗೂ ಸಹ ಶಿಕ್ಷಕರು ಸಿಬ್ಬಂದಿ ವರ್ಗ , ಮಕ್ಕಳ ಪೋಷಕರು ಹಾಜರಿದ್ದರು.

About The Author

Namma Challakere Local News
error: Content is protected !!