ಸಂಭ್ರಮಕ್ಕೆ ಸಾಕ್ಷಿಯಾದ ಮಾದಯ್ಯನಹಟ್ಟಿ ಮಾರಮ್ಮ ಜಾತ್ರೆ. ಟಿ.
ಬಸಪ್ಪ ನಾಯಕ
ನಾಯಕನಹಟ್ಟಿ:: ಪ್ರತಿ ಮೂರು ವರ್ಷಕ್ಕೊಮ್ಮೆ ಮಾದಯ್ಯನಹಟ್ಟಿ ಗ್ರಾಮದಲ್ಲಿ ಊರ ಮಾರಮ್ಮ ಜಾತ್ರೆ ಆಚರಣೆ ಮಾಡಲಾಗುತ್ತದೆ ಎಂದು ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ ಬಸಪ್ಪ ನಾಯಕ ಹೇಳಿದ್ದಾರೆ.
ಮಂಗಳವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾದಯ್ಯನಹಟ್ಟಿ ಗ್ರಾಮದ ಆರಾಧ್ಯ ದೇವತೆ ಶ್ರೀ ಊರ ಮಾರಮ್ಮ ದೇವಿ ಉತ್ಸವವನ್ನು ಅದ್ದೂರಿ ಮೆರವಣಿಗೆ ಮೂಲಕ ಹಿರೇಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿ ಅಲ್ಲಿಂದ ನೇರವಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ತೇರು ಬೀದಿಯ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ಕರೆತರಲಾಯಿತು.
ಇದೇ ವೇಳೆ ಮಾತನಾಡಿದ ಅವರು ಮಾದಯ್ಯನಹಟ್ಟಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಊರ ಮಾರಮ್ಮ ಹಬ್ಬ ಆಚರಣೆ ಮಾಡುತ್ತೇವೆ ಸಂಪ್ರದಾಯದಂತೆ ಊರು ಸುತ್ತ ಕಳ್ಳೆಹಾಕಿ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಣೆ ಮಾಡುತ್ತೇವೆ ಇಂದು ದೊಡ್ಡ ಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿಕೊಂಡು ಪಟ್ಟಣದ ರಾಜ ಬೀದಿಯಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಶ್ರೀ ಊರ ಮಾರಮ್ಮ ದೇವಿ ಉತ್ಸವ ಮೂರ್ತಿಯನ್ನು ಕರೆದೊಯ್ಯಲಾಗುತ್ತದೆ ಮಾದಯ್ಯನಹಟ್ಟಿ ಗ್ರಾಮದಲ್ಲಿ ದೇವಸ್ಥಾನದ ಆವರಣದಲ್ಲಿ ಶ್ರೀ ಮಾರಮ್ಮ ದೇವಿಯನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಗುರುವಾರ ಬೆಳಗ್ಗೆ 10 ಗಂಟೆಗೆ ಶ್ರೀ ಮಾರಮ್ಮ ದೇವಿಯನ್ನು ಗುಡಿದುಂಬಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಾದಯ್ಯನಹಟ್ಟಿಯ 9 ಜನ ಯಜಮಾನರು ಸಮಸ್ತ ಮಾದಯ್ಯನಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು

