ಚಳ್ಳಕೆರೆ :
ಮೊಳಕಾಲ್ಕೂರು: ಸಮಾಜದ ಸಂಘಟನೆಯಲ್ಲಿ
ರಾಜಕಾರಣ ಇರಬಾರದು
ಭೋವಿ ಸಮುದಾಯಕ್ಕೆ ತನ್ನದೇ ಆದ ಇತಿಹಾಸವಿದೆ,
ಸಮಾಜ
ಸಂಘಟನೆ ಮಾಡುವಾಗ ಯಾವುದೇ ರಾಜಕೀಯ ಬರಬಾರದು
ಹೀಗಿದ್ದಾಗ ಮಾತ್ರ ಸಮಾಜದ ಸಂಘಟನೆ ಸಾಧ್ಯವಿದೆ ಎಂದು
ಮೊಳಕಾಲ್ಕೂರಿನ ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದರು.
ಮೊಳಕಾಲ್ಕೂರಿನಲ್ಲಿಂದು ನಡೆದ ಭೋವಿ ಸಮಾಜದ
ಕಾರ್ಯಕ್ರಮದಲ್ಲಿಂದು ಮಾತಾಡಿ, ಪ್ರತಿಯೊಂದು ಸಮುದಾಯವು
ಸಂಘಟನೆಯಾಗಬೇಕು.
ಸಂಘಟನೆಯಿಂದ ಸಮುದಾಯಕ್ಕೆ
ಬಲ ಬರುತ್ತದೆ. ಸಮುದಾಯಗಳಲ್ಲಿರುವ ಪೋಷಕರು ಮಕ್ಕಳನ್ನು
ಶಿಕ್ಷಣವಂತರನ್ನಾಗಿ ಮಾಡಬೇಕೆಂದರು.

