ಚಳ್ಳಕೆರೆ : ನಾಯಕನಹಟ್ಟಿ ಸಮೀಪದ ಬೋಸೆದೇವರಹಟ್ಟಿ ಗೇಟ್ ಬಳಿ ಜರುಗಿದೆ.
ಜೂನ್ 20 ಬೆಳಿಗ್ಗೆ 8:00ಗೆ ಪ್ರಕರಣ ಬೆಳಕಿಗೆ ಬಂದಿದೆ.
ಜಗಳೂರು ತಾಲೂಕಿನ ಮುಸ್ಟೂರು ಮೂಲದ ಮಂಜುನಾಥ್ ಹಾಗೂ ಸ್ನೇಹಿತರು ಹೊಸ ಕಾರಿನಲ್ಲಿ ರಾಮದುರ್ಗದ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದರು.
ಅಲ್ಲಿಂದ ವಾಪಸ್ ಮುಸ್ಟೂರು ಗ್ರಾಮಕ್ಕೆ ಹೋಗುವಂತಹ ಸಂದರ್ಭದಲ್ಲಿ ಅತಿ ವೇಗ ಅಜಾಗ್ರತೆಯಿಂದ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಇನ್ನೂ ಕಾರಿನ ಡಿಕ್ಕಿ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಕಾರು ಕೂಡ ಸಂಪೂರ್ಣ ಜಖಂಗೊAಡಿದೆ.
ಜೂನ್ 20 ರ ಗುರುವಾರ ನಾಯಕನಹಟ್ಟಿ ಹೋಬಳಿಯಾದ್ಯಂತ ವಿದ್ಯುತ್ ವ್ಯತ್ಯಾಯ ಇರುವ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಘಟನಾ ಸ್ಥಳಕ್ಕೆ ನಾಯಕನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

About The Author

Namma Challakere Local News
error: Content is protected !!