ಚಳ್ಳಕೆರೆ : ರೈತರಿಗೆ ಯಾವುದೇ ರೀತಿಯಲ್ಲಿ ಬಿತ್ತನೆ ಬೀಜಕ್ಕೆ ಸಮಸ್ಯೆ ಯಾಗದಂತೆ ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಸೂಚಿಸಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರು. ಈ ಬಾರಿ ವಾಡಿಕೆ ಮಳೆಗಿಂತ ಹೆಚ್ಚಿನ ಮಳೆಯಾಗಿದೆ, ಆದ್ದರಿಂದ ರೈತರು ಈಗಾಗಲೇ ಬಿತ್ತನೆಗೆ ಸಜ್ಜು ಮಾಡಿಕೊಂಡಿದ್ದಾರೆ ಬೀಜ ಗೊಬ್ಬರ ಅಬಾವ ಸೃಷ್ಟಿಯಾಗದಂತೆ ಕ್ರಮ ವಹಿಸಬೇಕು ಎಂದರು.
ಪ್ರತಿ ಸಭೆಹೆ ಗೈರಾಗುವ ಮೀನುಗಾರಿಕೆ ಇಲಾಖೆ ಅಧಿಕಾರಿಗೆ ನೋಟಿಸ್ ಜಾರಿ ಮಾಡುವಂತೆ ತಾಕೀತು ಮಾಡಿದರು. ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡದಿದ್ದರೆ ಸರಕಾರ ಹಾಗೂ ಶಾಸಕರ ಭಯವಿಲ್ಲ ಎಂದು ಜನರು ಬೈಯುತ್ತಾಗಬಾರದು. ಸರಕಾದ ಯೋಜನೆಗಳನ್ನು ನೀಡಿದವರಿಗೆ ನೀಡದೆ ಅರ್ಹರನ್ನು ಗುರುತಿಸಿ ನೀಡ ಬೇಕು.
ಬಿತ್ತನೇ ಶೇಂಗಾ ಮಾರುಕಟ್ಟೆ ಬೆಲೆಗಿಂತ ಕೃಷಿ ಇಲಾಖೆಯಲ್ಲಿ ಹೆಚ್ಚಿಮ ಬೆಲೆಗೆ ನೀಡಿದರ ಉಪಯೋಗವಿಲ್ಲ ಬೆಲೆ ಕಡಿಮೆ ಮಾಡಲು ಸರಕಾರಕ್ಕೆ ಪತ್ರ ಬರೆಯಬೇಕು. ವಸತಿ ನಿಲಯಗಳಲ್ಲಿ ಶೌಚಾಲುಗಳು ಸ್ವಚ್ಚತೆ ಇದ್ದರೆ ಎಲ್ಲವೂ ಸ್ವಚ್ಚವಿದ್ದಂತೆ ರುಚಿ.ಶುಚಿ ಬಗ್ಗೆ ಗಮನಹರಿಸ ಬೇಕು ಅನಾವುತ ಸಂಭವಿಸಿದರೇ ನೇರವಾಗಿ ಅಧಿಕಾರಿಗಳೆ ಹೊಣೆಗಾರಿಕೆಯಾಗುತ್ತೀರಿ.
ಕೆಲವು ಶಿಕ್ಷಕರು ಶಾಲೆಗೆ ಹೋಗದೆ ರಾಜಕೀಯ ಮಾಡಿಕೊಂಡು ಓಡಾಡಿದರೆ ಫಲಿತಾಂಶ ಕುಸಿಯಲು ಕಾರಣವಾಗುತ್ತದೆ. ರೈತರಿಗೆ ಗುಣಮಟ್ಟದ ಬೀಜ ಗೊಬ್ಬರ ವಿತರಣೆ ಯಾಗಬೇಕು. ಕಮಾರಿಗಳ ಗುಟ್ಟ ಪರಿಶೀಲನೆ ಮಾಡಿದ ನಂತರ ಬಿಲ್ ಪಾವತಿಸಿ ಯಾರ ಒತ್ತಡಕ್ಕೂ ಮಣಿಯ ಬಾರದು.
ದೇವರ ಎತ್ತಗಳಿಗೆ ಇನ್ನು ಎರಡು ಮೂರು ದಿನದಲ್ಲಿ ಟ್ರಸ್ಟ ಮಾಡಿಸ ಬೇಕು . ಬೆಳೆ ಪರಿಹಾರ ಬೆಳೆವಿಮೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸ ಬೇಕು ರೈತರಿಗೆ ಒಂದು ದಿನ ಕಾರ್ಯಗಾರ ಆಯೋಜಿಸುವಂತೆ ಸೂಚಿಸಿದರು.
ಇದೇ ಸಂಧರ್ಭದಲ್ಲಿ ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಮಂಜುನಾಥ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ತಹಶಿಲ್ದಾರ್ ರೇಹಾನ್ ಪಾಷ, ಚಿತ್ರದುರ್ಗ ತಹಶಿಲ್ದಾರ್ ನಾಗವೇಣಿ, ನಗರಸಭೆ ಪೌರಾಯುಕ್ತ ಕೆ ಜೀವನ್ ಕಟ್ಟಿಮನಿ, ಡಿವೈಎಸ್ ಪಿ, ಬಿ.ಟಿ.ರಾಜಣ್ಣ, ಪಿಐ, ಆರ್.ದೇಸಾಯಿ, ಕೃಷಿ ಅಧಿಕಾರಿ ಅಶೋಕ್, ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷಪ್ಪ, ಪಶು ಅಧಿಕಾರಿ ರೇವಣ್ಣ, ಅರಣ್ಯ ಇಲಾಖೆ ಅಧಿಕಾರಿ ಬಹುಗುಣ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ನಿತೀನ್, ಪಿಡ್ಯೂ ಅಧಿಕಾರಿ ಬಾಸ್ಕ್ ರ್, ಹಾಗೂ ಕೆಡಿಪಿ ನಾಮನಿರ್ದೇಶನ ಸದಸ್ಯ ಎಂ.ರಮೇಶ್, ಎಸ್.ಬಿ.ವಿಶ್ವನಾಥ್ ರೆಡ್ಡಿ, ನೇತ್ರಾವತಿ.ಸುರೇಶ್, ಇತರರು ಇದ್ದರು.