ಚಳ್ಳಕೆರೆ ನ್ಯೂಸ್ :

ಕಳೆದ ಒಂದು ವಾರದಿಂದ ವರುಣರಾಯನ‌ ಕೃಪೆಯಿಂದ ಬಯಲು ಸೀಮೆ ತಂಪಾಗಿ ರೈತನ‌ ಮೊಗದಲ್ಲಿ‌ ಸಂತಸ ಮನೆ ಮಾಡಿದೆ.

ಅದರಂತೆ‌ ರಾತ್ರಿಯಿಡಿ ಒಂದೇ ಸಮನೆ ಸುರಿದ ಮಳೆಯರಾಯ
ಎರಡು ದಿನಗಳ ಕಾಲ ಬಿಡುವು ನೀಡಿದ್ದ,,

ಆದರೆ ವರುಣ ದೇವ, ತಡ
ರಾತ್ರಿ ಮತ್ತೆ‌ ಅಬ್ಬರಿಸಿದ್ದು ನಗರದಲ್ಲಿ ಮಳೆ ಜೋರಾಗಿದೆ.

ಇದರಿಂದ ಚಿತ್ರದುರ್ಗ ನಗರದ
ಹಳ್ಳಕೊಳ್ಳಗಳು ತುಂಬಿ ಹರಿದವು. ತಡ ರಾತ್ರಿ ಆರಂಭವಾದ ಮಳೆ
ಗುಡುಗು ಸಿಡಿಲು ಮಿಂಚಿನಿಂದ ಕೂಡಿತ್ತು. ಸುಮಾರು ಎರಡರಿಂದ
ಮೂರು ತಾಸುಗಳ ಕಾಲ ಮಳೆ ಎಡ ಬಿಡದೆ ಸುರಿದಿದ್ದು,
ಬೆಳಗ್ಗೆಯಿಂದ ಕಾದಿದ್ದ ಬಿಸಲ ಬೇಗೆಯನ್ನು ತಂಪು ಮಾಡಿತ್ತು.
ಇದರಿಂದ ವಾತಾವರಣದಲ್ಲಿ ತಂಪು ಕಂಡು ಬರುತ್ತಿದೆ.

About The Author

Namma Challakere Local News
error: Content is protected !!