ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ನಗರದಲ್ಲಿ ವೈಭವಯುತವಾಗಿ ಜರುಗಿದ ಉಚ್ಚಂಗಿಯಲ್ಲಮ್ಮ ಜಾತ್ರೆ
ಚಿತ್ರದುರ್ಗದ ಪಾಳೇಗಾರರ ಅಧಿದೇವತೆಯಾದ
ಉಚ್ಚಂಗಿಯಲ್ಲಮ್ಮನ ಜಾತ್ರೆಯ ರಥೋತ್ಸವವು ಅದ್ದೂರಿ ಮತ್ತು
ವೈಭವದಿಂದ ನಡೆಯಿತು.
ಶಕ್ತಿ ಸ್ವರೂಣಿಯನ್ನಾಗಿ ಅಲಂಕರಿಸಿದ್ದು,
ಕೈಯಲ್ಲಿ ತ್ರಿಶೂಲ, ಶಂಖು, ಚಕ್ರ ಖತ್ತಿಯನ್ನು ಇಟ್ಟು, ವಿವಿಧ
ಪುಷ್ಪಗಳಿಂದ ಅಲಂಕರಿಸಿದ್ದು, ದೇವಿಯು ಕಣ್ಮನ ಸೆಳೆಯುವಂತಿತ್ತು.
ಆಲಾಶ್ವರೂಢಳಾದ ದೇವಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ
ಭರ್ಜರಿ ಮೆರವಣಿಗೆಯನ್ನು ಮಾಡಲಾಯಿತು.
ಯುವಕರು
ದೇವಿಯ ಮುಂದೆ ವಾದ್ಯಗಳ ನಾದಕ್ಕೆ ತಕ್ಕಂತೆ ಕುಣಿದು
ಕುಪ್ಪಳಿಸಿದರು.