ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದ ಪದ್ಮಸಾಲಿ ಸಮುದಾಯದವತಿಯಿಂದ ಸೋಮವಾರ
ಆಯೋಜಿದ್ದ ಶ್ರೀ ಭಕ್ತ ಮಾರ್ಖಾಂಡೇಯ ಜಯಂತಿ ಅಂಗವಾಗಿ ಸಮುದಾಯದ ಎಲ್ಲಾ ಭಾಂದವರು ಸೇರಿ ಜಾಗೃತಿ ಬೈಕ್ ರ್ಯಾಲಿ ಮಾಡುವ ಮೂಲಕ ಜಯಂತಿಗೆ ಮೆರಗು ತಂದರು.

ಇನ್ನೂ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಕೆ.ಸಿ.ವೀರೇಂದ್ರ ಪಪ್ಪರವರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಯಂತಿಯ ಸಂದೇಶ ಸಾರಿದರು.

ಪದ್ಮಸಾಲಿ ಸಮುದಾಯ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕು, ಇನ್ನೂ ಸಮುದಾಯದ ಮಕ್ಕಳು ವ್ಯಾಸಂಗದಲ್ಲಿ ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಮಾದರಿ ಸಮಾಜ ನಿರ್ಮಾಣಕಗಕ್ಕೆ ನಾಂಧಿ ಮಾಡಬೇಕು ಎಂದರು.

ನಗರದ
ಸುಧಾಕರ್ ಕ್ರೀಡಾಂಗಣದ ಬಳಿ ಆಯೋಜಿಸಿದ್ದ ಬೈಕ್ ರ್ಯಾಲಿಗೆ
ಚಾಲನೆ ನೀಡಿ ನಂತರ ಮಾತನಾಡಿದರು. ವಾಲ್ಮೀಕಿ
ವೃತ್ತ.ಅಂಬೇಡ್ಕರ್ ವೃತ್ತ, ನೆಹರು ವೃತ್ತ ಸೇರಿದಂತೆ ಪ್ರಮುಖ
ರಸ್ತೆಯಲ್ಲಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು, ಜಿಲ್ಲಾ ಜಂಟಿ‌ ಕೃಷಿ‌‌ನಿರ್ದೇಶಕ ಮಂಜುನಾಥ್, ಹಾಗೂ ಶ್ರೀ ಸತ್ಯನಾರಾಯಣ ಇರಿಗೇಷನ್ ಮಾಲೀಕರಾದ ಸತ್ಯನಾರಾಯಣ, ಹಾಗು ಸಂಘದ ಅಧ್ಯಕ್ಷರು, ಇತರ ಮುಖಂಡರು
ಸಮುದಾಯದ ಮುಖಂಡರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!