ನಾಯಕನಹಟ್ಟಿ:: ಶ್ರೀ ಆಂಜನೇಯ ಸ್ವಾಮಿ ಪೂಜಾ ಕೈ ಕಾರ್ಯಗಳ ಮೂಲಕ ಕಳಸ ಸ್ಥಾಪನೆಗೆ ಭಕ್ತಿ ಭಾವಕ್ಕೆ ಸಾಕ್ಷಿಯಾದ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರು.

ಸಮೀಪದ ಅಬ್ಬೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 6.45.ಗಂಟೆ ಗೆ ಶ್ರೀ ಆಂಜನೇಯ ಸ್ವಾಮಿಯ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಕಳಸ ಸ್ಥಾಪನೆ ಮಾಡಲಾಯಿತು.

ಗ್ರಾಮದ ಮುಖಂಡ ಬಿ.ಚಂದ್ರಣ್ಣ ಮಾತನಾಡಿ ಶ್ರೀ ಆಂಜನೇಯ ಸ್ವಾಮಿ ಕೃಪಾ ಆಶೀರ್ವಾದ ಗ್ರಾಮದ ಪ್ರತಿಯೊಬ್ಬರ ಮೇಲೆ ಇರಲಿ ಎದ್ದರು.

ಯುವ ಮುಖಂಡ ಜಿ .ಎಂ. ಜಯಣ್ಣ ಮಾತನಾಡಿ ನಮ್ಮ ಗ್ರಾಮದ ಬಹುದಿನದ ಕನಸು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಊರಿನ ಸಮಸ್ತ ಗ್ರಾಮಸ್ಥರು ಸಮ್ಮುಖದಲ್ಲಿ ಇಂದು ವಿಜೃಂಭಣೆಯಿಂದ ಕಳಸ ಸ್ಥಾಪನೆಯನ್ನು ಮಾಡಲಾಗಿದೆ.
ಶ್ರೀ ಆಂಜನೇಯ ಸ್ವಾಮಿ ದೇವರ ಅನುಗ್ರಹದಿಂದ ಗ್ರಾಮಕ್ಕೆ ಉತ್ತಮ ಮಳೆ ಬೆಳೆ ಶಾಂತಿ ಕರುಣಿಸಲಿ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಬಿ ಚಂದ್ರಣ್ಣ, ಮಾಳಿಗೆ ಪಾಪಯ್ಯ, ಮೀಸೆ ಓಬಯ್ಯ, ಹೊಸ ಕಪಿಲೆ ಬೋರಯ್ಯ, ಮೂಕ ಓಬಯ್ಯ, ದೋ. ಜಗಲೂರಯ್ಯ, ಮಲ್ಲಿಕಾರ್ಜುನ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಿ. ಅನಿತಮ್ಮ ಜಿ ಎಂ ಜಯಣ್ಣ, ಸದಸ್ಯರಾದ ಪಟೇಲ್ ಗುಂಡಯ್ಯ, ಸಿದ್ದಲಿಂಗಮ್ಮ ಗುಂಡಯ್ಯ, ಮಂಜುಳಾ ದುರುಗೇಶ್, ಕೆ .ಟಿ. ಮಲ್ಲಿಕಾರ್ಜುನ್ ವಕೀಲ ವೈ. ಮಲ್ಲೇಶ್, ಬಿಲ್ ಕಲೆಕ್ಟರ್ ಎಸ್ ಶಿವತಿಪ್ಪೇಸ್ವಾಮಿ, ಬೂಟ್ ತಿಪ್ಪೇಸ್ವಾಮಿ, ಶಿಕ್ಷಕ ಡಿ ಎಂ ಪಾಲಯ್ಯ, ಎನ್ ತಿಪ್ಪೇಸ್ವಾಮಿ, ಕಾಮಯ್ಯ, ಚನ್ನಪ್ಪ, ರಂಗಪ್ಪ, ಶ್ರೀನಿವಾಸ, ಮದಕರಿ ತಿಪ್ಪೇಸ್ವಾಮಿ, ರುದ್ರಮನಿ, ಬಂಗಾರಿ ತಿಪ್ಪೇಸ್ವಾಮಿ, ಸಮಸ್ತ ಗುಂತುಕೋಲಮ್ಮನಹಳ್ಳಿ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!