ನಾಯಕನಹಟ್ಟಿ:: ಸಮೀಪದ ಜೋಗಿಹಟ್ಟಿ ಗ್ರಾಮದ ಅಂಬೇಡ್ಕರ್ ಕಾಲೋನಿಯ ಶ್ರೀ ದುರ್ಗಾಪರಮೇಶ್ವರಿ ನೂತನ ದೇವಸ್ಥಾನ ಪ್ರಾರಂಭೋತ್ಸವ ಪ್ರಯುಕ್ತ.
ಸೋಮವಾರ ಜೋಗಿಹಟ್ಟಿ ಗ್ರಾಮಸ್ಥರು ಸಕಲ ಬಿರುದಾವಳಿಗಳೊಂದಿಗೆ ಹತ್ತಿರದ ಹಿರೇಕೆರೆಯಲ್ಲಿ ನೂತನ ಉತ್ಸವ ಮೂರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಿ ಗಂಗಾ ಪೂಜೆಯನ್ನು ಅದ್ದೂರಿಯಾಗಿ ಸಕಲ ಪೂಜಾ ಕೈ ಕಾರ್ಯಗಳನ್ನು ಸಲ್ಲಿಸಿ ನಂತರ ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಅದ್ದೂರಿ ಕುಂಭಮೇಳ ತಮಟೆ ಉರುಮೆ ಸಕಲ ವಾದ್ಯಗಳೊಂದಿಗೆ ಗ್ರಾಮಕ್ಕೆ ಕರೆತರಲಾಯಿತು.
ಇನ್ನೂ ಗ್ರಾಮದ ಮಹಿಳೆಯರು ದಾರಿ ಉದ್ದಕ್ಕೂ ಶ್ರೀ ದುರ್ಗಾಪರಮೇಶ್ವರಿ ದೇವಿಯ ನೆನೆಯುತ್ತಾ ಸೋಬಾನೆ ಪದ ದೇವಿಯ ಕುರಿತು ಪ್ರಾರ್ಥನೆ ಪದಗಳನ್ನು ಹಾಡುತ್ತಾ ನೆನೆದರು.
ಶ್ರೀ ದುರ್ಗಾಪರಮೇಶ್ವರಿ ದೇವಿ ನೂತನ ದೇವಾಲಯದ ಪ್ರಾರಂಭೋತ್ಸವದ ಪ್ರಯುಕ್ತ ನಾಳೆ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ನೂತನ ದೇವಾಲಯದ ಉದ್ಘಾಟನೆಯನ್ನು ಶ್ರೀ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ ಅವರ ಅಮೃತ ಹಸ್ತಗಳಿಂದ ಉದ್ಘಾಟಿಸಲಾಗುವುದು ಎಂದು ಗ್ರಾಮದ ಹಿರಿಯರು ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡ ಹುರುಳಿ ತಿಪ್ಪೇಸ್ವಾಮಿ, ಎಂ. ಜಿ. ತಿಪ್ಪೇಸ್ವಾಮಿ, ಹಟ್ಟಿಯ ಯಜಮಾನ ಸಣ್ಣ ನಾಗಪ್ಪ, ಮಾಳಿಗೆ ತಿಮ್ಮಯ್ಯ, ದಡ್ಡಪ್ಪ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಮಲ್ಲಪ್ಪ, ಕಾಶಿಪುರ ದುರುಗಪ್ಪ, ಉರುಕಜ್ಜರ್ ರತ್ನಪ್ಪ, ಮತ್ತು ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಸಣ್ಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಟಿ. ತಿಪ್ಪೇಶ್, ಸೇರಿದಂತೆ ಸಮಸ್ತ ಜೋಗಿಹಟ್ಟಿ ಗ್ರಾಮಸ್ಥರು. ಹಾಗೂ ಅಂಬೇಡ್ಕರ್ ಕಾಲೋನಿಯ ಸಮಸ್ತ ಗ್ರಾಮಸ್ಥರು ಇದ್ದರು.