ತಾಲೂಕಿನಲ್ಲಿ ಉತ್ತಮ ಸಮೃದ್ಧಿ ಮಳೆಗಾಗಿ ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿಯ ಮೊರೆಹೋದ ಭಕ್ತ ಸಮೂಹ
ಚಳ್ಳಕೆರೆ: ತಾಲೂಕಿನಲ್ಲಿ ಈಗಾಗಲೇ ಮುಂಗಾರು ಮಳೆ ಪ್ರವೇಶವಾಗಿ ರೈತರು ತಮ್ಮ ಹೊಲಗಳಲ್ಲಿ ಶೇಂಗಾವನ್ನು ಬಿತ್ತನೆ ಕಾರ್ಯ ಮಾಡುವ ಹಂತ ತಲುಪಬೇಕಾಗಿತ್ತು. ಆದರೆ ಇದು ಸಾಧ್ಯವಾಗಿಲ್ಲ ಹೀಗಾಗಿ ಇಂದು ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಹಾಗೂ ಶ್ರೀ ಪರ್ವತ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ವತಿಯಿಂದ ದೇವಾಲಯದಲ್ಲಿ ಉತ್ತಮ ಸಮೃದ್ಧಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.
ಈ ವೇಳೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಮಾತನಾಡಿದ ಅರ್ಚಕ ವೀರಯ್ಯ ಪ್ರತಿ ವರ್ಷ ಆಷಾಢ ಮಾಸದಲ್ಲಿ ದೇವಾಲಯದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಮಳೆಗಾಗಿ ಪ್ರಾರ್ಥಿಸಿ ಸೂಜಿ ಮಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಪ್ತಮಾತ್ರುಕ ಪೂಜೆ ಗಂಗಾ ಪೂಜೆ ಮಹಾ ಮಂಗಳಾರತಿಗಳನ್ನು ನೆರವೇರಿಸಲಾಗುತ್ತಿದೆ ಪ್ರತಿ ವರ್ಷವೂ ತಾಲೂಕಿನಲ್ಲಿ ಮುಂಗಾರು ಸ್ವಲ್ಪ ವಿಳಂಬವಾಗಿ ಆರಂಭವಾಗುತ್ತದೆ ಇದರಿಂದ ಶೇಂಗಾ ಬಿತ್ತನೆ ಕಾರ್ಯ ವಿಳಂಬಗೊಳ್ಳುತ್ತಿದೆ ಸ್ವಾಮಿಯ ಕೃಪೆಯಿಂದ ಮುಂಗಾರು ಮಳೆ ಬಂದರೆ ರೈತರು ಹರ್ಷ ಚಿತ್ತರಾಗುವುದಲ್ಲದೆ ತಾಲೂಕಿನ ಜನತೆ ನೆಮ್ಮದಿಯಿಂದ ಬದುಕಲು ಸಹಕಾರಿಯಾಗುತ್ತದೆ ಎಂದರು.
ಪೂಜೆಯ ನೇತೃತ್ವ ವಹಿಸಿದ್ದ ಕೋಟೆ ಚಂದ್ರಶೇಖರ್ ಮಾತನಾಡಿ ತಾಲೂಕಿನಲ್ಲಿ ಭರದ ಛಾಯೆ ಆವರಿಸಿದೆ ರೈತರು ತಮ್ಮ ಜಮೀನುಗಳನ್ನು ಹಸನು ಮಾಡಿಕೊಂಡು ವರುಣನ ಕೃಪೆಗಾಗಿ ಎದುರು ನೋಡುತ್ತಿದ್ದಾರೆ ಸೂಜಿ ಮಲ್ಲೇಶ್ವರ ಸ್ವಾಮಿಗೆ ಈ ಹಿಂದೆ ಹೆಡಿಗೆ ಜಾತ್ರೆ ಎಂದು ಮಾಡುತ್ತಿದ್ದರು ಊರಿನ ಗ್ರಾಮಸ್ಥರು ಸೇರಿ ಎಡೆ ಹಾಕಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದರು ಕಾಲಕ್ರಮೇಣ ಈ ಜಾತ್ರೆ ನಿಂತು ಹೋಗಿದ್ದರಿಂದ ತಾಲೂಕಿನಲ್ಲಿ ಮಳೆಯ ಅಭಾವ ಉಂಟಾದ ಕಾರಣ ತಾಲೂಕಿನ ಜನತೆ ಸೇರಿ ಕಳೆದ 25 ವರ್ಷಗಳಿಂದ ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿಗೆ ಗಂಗಾಪೂಜೆ ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಕಾರ್ಯಗಳನ್ನು ನೆರವೇರಿಸಲಾಗುತ್ತದೆ ವಿಶೇಷ ಪೂಜೆ ಸಲ್ಲಿಸಿದರೆ ಮಳೆ ಬರುತ್ತದೆ ಎಂಬುದು ಈ ತಾಲೂಕಿನಲ್ಲಿ ಪ್ರತೀತಿಯಾಗಿದೆ ಹೀಗಾಗಿ ಇಂದು ಪೂಜೆಯನ್ನು ನೆರವೇರಿಸಿದ್ದೇವೆ ಮುಂದೆ ಉತ್ತಮ ಮಳೆಯಾಗಿ ತಾಲೂಕಿನ ರೈತಾಪಿ ವರ್ಗ ಹಾಗೂ ಜನತೆ ಸುಖ ಶಾಂತಿ ನೆಮ್ಮದಿಯಿಂದ ಬದುಕಲು ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿ ಕೃಪೆ ತೋರುತ್ತಾನೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.ಈ ವೇಳೆ ತಾಲೂಕಿನ ಭಕ್ತ ವರ್ಗ ದೇವರ ದರ್ಶನ ಪಡೆದು ತಮ್ಮ ತನು ಮನ ಧನವನ್ನು ಅರ್ಪಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಸೂಜಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ವಸಂತ್ ಕುಮಾರ್ ಜಯಣ್ಣ ಬಸವರಾಜ್ ಶಿವಣ್ಣ ರಾಜಶೇಖರಯ್ಯ ಮಲ್ಲಿಕಾರ್ಜುನ ಮಹಾಂತೇಶ್ ಅಜ್ಜಪ್ಪ ಪದ್ಮನಾಭ ಗೌಡ್ರು ರಾಮಣ್ಣ ಕೋಟೆ ಬಸವರಾಜ್ ಕೆಪಿ ಲೋಕೇಶ್ ಎಂ ವೀರೇಶ್ ತಬಲ ಮಂಜಣ್ಣ ಆದಿ ಭಾಸ್ಕರ ಶ್ರೇಷ್ಠಿ ಸಿದ್ದಜ್ಜ ಹಾಗೂ ನಗರದ ಭಕ್ತ ಸಮೂಹ ಪಾಲ್ಗೊಂಡಿತ್ತು.

